ಪಾಟ್ನಾ: ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಂಜ್ಹಿ ಮಹಿಳೆಯರ ನೈತಿಕತೆಯನ್ನು ಪ್ರಶ್ನಿಸುವಂತ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇದೀಗ ಚರ್ಚೆಗೆ ಗ್ರಾಸವಾಗಿದ್ದಾರೆ. ಇವರ ಹೇಳಿಕೆಯಿಂದಾಗಿ ಜೆಡಿಯು ತಬ್ಬಿಬ್ಬಾಗಿದೆ.
ಪಾಟ್ನಾದಲ್ಲಿ ಖಾಸಗಿ ಕಾರ್ಯಕ್ರಮದ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿತನ್ ರಾಮ್, ಬಿಹಾರಿಗಳು ಉದ್ಯೋಗವನ್ನರಸಿ ರಾಜ್ಯಬಿಟ್ಟು, ಬೇರೆ ರಾಜ್ಯಗಳಿಗೆ ವರ್ಷಗಟ್ಟಲೆ ಹೋಗುವುದರಿಂದ, ಮನೆಯಲ್ಲಿರುವ ಮಹಿಳೆಯರು, ಪತ್ನಿಯರು ಬೇರೆ ಏನು ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿತನ್ ರಾಮ್ ಮಂಜ್ಹಿ ಅವರ ಈ ಹೇಳಿಕೆ ಮಹಿಳೆಯರ ನೈತಿಕಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ಹೇಳಿಕೆಯ ವಿರುದ್ದ ಸ್ಥಳೀಯ ಮಹಿಳಾ ಸಂಘಟನೆಗಳು ಬಾರಿ ವಿರೋಧ ವ್ಯಕ್ತಪಡಿಸಿವೆ.
ಅಲ್ಲದೆ ವಿರೋಧ ಪಕ್ಷಗಳು ಸಹಾ, ಜಿತನ್ ರಾಮ್ ನೀಡಿರುವ ಹೇಳಿಕೆಗೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿವೆ.
ಜಿತನ್ ರಾಮ್ ಈ ಹಿಂದೆಯೂ, 'ಮೇಲ್ಜಾತಿಯವರು ವಿದೇಶಿ ಮೂಲದವರು, ದಲಿತರು, ಆದಿವಾಸಿಗಳು ಮಾತ್ರ ಭಾರತೀಯರು' ಎಂದು ಹೇಳಿಕೆ ನೀಡಿದ್ದರು.