ದೇಶ

ನೀಲಿ ಕಪ್ಪು ಶಾಯಿ ಬಳಸಿ

Rashmi Kasaragodu

ನವದೆಹಲಿ: ಇನ್ನು ಮುಂದೆ ಎಲ್ಲ ಸರ್ಕಾರಿ ಅಧಿಕಾರಿಗಳು ಟಿಪ್ಪಣಿ ಅಥವಾ ಸೂಚನೆಗಳಿಗೆ ಸಹಿ ಹಾಕಲು ನೀಲಿ ಅಥವಾ ಕಪ್ಪು ಶಾಯಿಯ ಪೆನ್ನನ್ನೇ ಬಳಸಬೇಕು. ಹೀಗೆಂದು ಸಿಬ್ಬಂದಿ ಮತ್ತು ಸಾರ್ವಜನಿಕರ ಕುಂದುಕೊರತೆ ಹಾಗೂ ಪಿಂಚಣಿಗಳ ಸಚಿವಾಲಯ ಸೂಚನೆ ನೀಡಿದೆ. ಈ ಹಿಂದೆ ಅಧಿಕೃತ ಪತ್ರವ್ಯವಹಾರಗಳಿಗೆ ಸಹಿ ಹಾಕಲು ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಮೇಲ್ಮಟ್ಟದ ಅಧಿಕಾರಿಗಳಿಗೆ ಹಸಿರು ಅಥವಾ ಕೆಂಪು ಬಣ್ಣದ ಶಾಯಿಯ ಪೆನ್ನನ್ನು ಬಳಸಲು ಅನುಮತಿ ಇತ್ತು. ಇದೇ ವೇಳೆ, ಟೆಲಿಗ್ರಾಂ ಬಳಕೆ ನಿಲ್ಲಿಸಬೇಕು ಎಂದು ಸಚಿವಾಲಯ ಸೂಚಿಸಿದೆ. ಟೆಲಿಗ್ರಾಂ ಸೇವೆ ನಿಲ್ಲಿಸಿ ವರ್ಷದ ಬಳಿಕ ಈ ಆದೇಶ ಹೊರಡಿಸಿದ್ದು ಅಚ್ಚರಿ ಮೂಡಿಸಿದೆ.

SCROLL FOR NEXT