ದೇಶ

ಮುಂದಿನ ಗುರಿ ಮೋದಿ

ವಾಘಾ ಗಡಿಯಲ್ಲಿ ಸ್ಫೋಟ ನಡೆಸಿದ ಉಗ್ರ ಸಂಘಟನೆಯ ಮುಂದಿನ ಟಾರ್ಗೆಟ್ ಭಾರತದ...

ಇಸ್ಲಾಮಾಬಾದ್: ವಾಘಾ ಗಡಿಯಲ್ಲಿ ಸ್ಫೋಟ ನಡೆಸಿದ ಉಗ್ರ ಸಂಘಟನೆಯ ಮುಂದಿನ ಟಾರ್ಗೆಟ್ ಭಾರತದ ಪ್ರಧಾನಿ ನರೇಂದ್ರ ಮೋದಿಯಂತೆ!

ಹೀಗೆಂದು ಸ್ವತಃ ಪಾಕಿಸ್ತಾನದ ತಾಲಿಬಾನ್ ತಿಳಿಸಿದೆ. ವಾಘಾ ಸ್ಫೋಟಕ್ಕೆ ಕಾರಣರಾದ ಇಬ್ಬರು ಉಗ್ರರ ಫೋಟೋಗಳನ್ನು ಟ್ವೀಟ್ ಮಾಡಿರುವ ತಾಲಿಬಾನ್ ಈ ವಿಚಾರವನ್ನು ಬಹಿರಂಗಪಡಿಸಿದೆ.

ನ.2ರಂದು ವಾಘಾ ಗಡಿಯಲ್ಲಿ ನಡೆದ ಸ್ಫೋಟದಿಂದ 60 ಮಂದಿ ಸಾವಿಗೀಡಾಗಿದ್ದರು. ಈ ಸ್ಫೋಟದ ಹೊಣೆ ಹೊತ್ತಿರುವ ತೆಹ್ರೀಕ್-ಇ-ತಾಲಿಬಾನ್-ಪಾಕಿಸ್ತಾನ ಜಮಾತ್-ಉಲ್- ಅಹ್ರಾರ್ ಎಂಬ ಉಗ್ರ ಸಂಘಟನೆಯು ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಮುಂದಿನ ಗುರಿ ಎಂದು ಅಧಿಕೃತವಾಗಿ ಘೋಷಿಸಿದೆ.

ವಾಘಾ ಸ್ಫೋಟ ಸಂಬಂಧ ಸರಣಿ ಟ್ವೀಟ್ ಮಾಡರಿವ ಅಲ್-ಅಹ್ರಾರ್ ವಕ್ತಾರ ಎಹ್ಸಾನ್ ಒಂದು ಟ್ವೀಟ್‌ನಲ್ಲಿ ಮೋದಿ ಬಗ್ಗೆ ಪ್ರಸ್ತಾಪಿಸಿದ್ದಾನೆ. ಈ ಟ್ವೀಟ್‌ಗಳನ್ನು ಮಾಡಿದ ಸ್ವಲ್ಪ ಹೊತ್ತಲ್ಲೇ ಆತನ ಟ್ವಿಟರ್ ಖಾತೆ ಮಾಯವಾಗಿದೆ. ಆದರೆ ಬಳಿಕ ಆತ ಹೊಸ ಖಾತೆಯೊಂದಿಗೆ ಮತ್ತೆ ಟ್ವಿಟರ್ ಪ್ರವೇಶಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!