ದೇಶ

ಹಕ್ಕಿಗಿಂತ ಮಕ್ಕಳ ಕ್ಷೇಮಾಭಿವೃದ್ಧಿಯೇ ಮುಖ್ಯ: ಕೋರ್ಟ್

Mainashree

ನವದೆಹಲಿ: ವಿಚ್ಛೇದಿತ ದಂಪತಿಗಳ ಮಕ್ಕಳು ಯಾರ ಹಕ್ಕು ಎಂಬುದಕ್ಕಿಂತ, ಮಕ್ಕಳ ಕ್ಷೇಮಾಭಿವೃದ್ದಿಯೇ ಮುಖ್ಯವಾಗಿರುತ್ತದೆ ಎಂದು ಇಲ್ಲಿನ ಸೆಷನ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಕ್ಕಳನ್ನು ಯಾರ ಅಧೀನಕ್ಕೆ ನೀಡಬೇಕು, ಮಗುವು ಯಾರ ಹಕ್ಕು, ಎಂಬುದು ಮುಖ್ಯವಲ್ಲ. ಮಗುವಿನ ಹಾರೈಕೆ ಬಹಳ ಮುಖ್ಯವಾಗುತ್ತದೆ. ಪಾಲನೆಯೊಂದಿಗೆ ಮಗುವಿನ ಏಳಿಗೆಯು ಬಹಳ ಮುಖ್ಯವಾಗಿರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ವಿಚ್ಛೇದಿತ ದಂಪತಿಗಳು ಮಕ್ಕಳು ಯಾರ ಅಧೀನದಲ್ಲಿದ್ದರೇ, ಮಕ್ಕಳ ಏಳಿಗೆಯಾಗುತ್ತದೆ ಎಂದು ಚಿಂತಿಸಬೇಕೇ ಹೊರತು, ಮಕ್ಕಳು ಯಾರ ಹಕ್ಕು ಎಂಬುದಲ್ಲ ಎಂದು ಸೆಷನ್ ನ್ಯಾಯಾಲಯ ತಿಳಿಸಿದೆ.

ವಿಚ್ಛೇದಿತ ಪುರಷನೊಬ್ಬ ತನ್ನ ಮಗಳ ಭೇಟಿ ಮಾಡಲು ಅನುಮತಿ ನೀಡಿದ ನ್ಯಾಯಾಲಯ, ಮಗಳು ಯಾರ ಹಕ್ಕು, ಯಾರ ಅಧೀನದಲ್ಲಿರಬೇಕು ಎಂಬುದು ಮುಖ್ಯವಲ್ಲ. ಆ ಮಗುವಿನ ಪಾಲನೆ ಬಹಳ ಮುಖ್ಯ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

SCROLL FOR NEXT