ದೇಶ

ಬಿಹಾರದ ಅಭಿವೃದ್ಧಿಗೆ ಸಹಕರಿಸದ ಕೇಂದ್ರದ 7 ಸಚಿವರಿಗೆ ರಾಜ್ಯಕ್ಕೆ ಪ್ರವೇಶವಿಲ್ಲ: ಮಂಝಿ

Vishwanath S

ಪಾಟ್ನಾ: ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸಿಗಬೇಕೆಂದು ಆಗ್ರಹಿಸಿರುವ ಮುಖ್ಯಮಂತ್ರಿ ಜೀತನ್ ರಾಮ್ ಮಂಝಿ ಅವರು, ಬಿಹಾರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡದ ಸಚಿವರನ್ನು ರಾಜ್ಯದೊಳಗೆ ಬರಲು ಬಿಡುವುದಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ವಿಶ್ವ ಶೌಚಾಲಯ ದಿನವಾದ ಇಂದು ಪಾಟ್ನಾದಲ್ಲಿ ಮಾತನಾಡಿದ ಅವರು, ಬರ್ಹಿದೆಸೆ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಕೇಂದ್ರ ಸರ್ಕಾರ ಸೂಕ್ತವಾಗಿ ಸಹಕರಿಸುತ್ತಿಲ್ಲ. ಇದೇ ವೇಳೆ ರಾಜ್ಯದಿಂದ ಸಂಸದರಾಗಿ ಕೇಂದ್ರ ಸಚಿವರಾಗಿರುವ ಬಿಹಾರ ಸಂಸದರು ರಾಜ್ಯದ ಅಭಿವೃದ್ಧಿಗೆ ಸ್ಪಂಧಿಸುತ್ತಿಲ್ಲ. ಹೀಗಾಗಿ ಆ ಏಳು ಸಚಿವರನ್ನು ರಾಜ್ಯದೊಳಗೆ ಬರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಬಿಹಾರದಿಂದ ಸಂಸದರಾಗಿರುವ ರಾಮವಿಲಾಸ್ ಪಾಸ್ವಾನ್, ರವಿಶಂಕರ್ ಪ್ರಸಾದ್, ರಾಜೀವ್ ಪ್ರತಾಪ್ ರೂಡಿ, ರಾಧಾ ಮೋಹನ್ ಸಿಂಗ್, ಗಿರಿರಾಜ್ ಸಿಂಗ್, ರಾಮಕೃಪಾಲ್ ಯಾದ್ ಮತ್ತು ಉಪೇಂದ್ರ ಕುಶವಾಹ ಅವರು ಕೇಂದ್ರ ಸಚಿವರಾಗಿದ್ದು, ಬಿಹಾರದಲ್ಲಿ ರಸ್ತೆ ಮತ್ತು ಬಡವರಿಗೆ ಮನೆ ನಿರ್ಮಾಣ ಮಾಡಲು ಕೇಂದ್ರದಿಂದ ಅವಶ್ಯಕ ಹಣ ಕೊಡಿಸಲು ಸಚಿವರು ಯತ್ನಿಸಬೇಕು ಎಂದು ಮಂಝಿ ಒತ್ತಾಯಿಸಿದ್ದಾರೆ.

ಬರ್ಹಿದೆಸೆ ಮುಕ್ತ ರಾಜ್ಯವನ್ನಾಗಿ ಮಾಡುವ ಆಸೆ ಸರ್ಕಾರಕ್ಕೆ ಇದ್ದು, 2019ರ ವೇಳೆ ರಾಜ್ಯದಲ್ಲಿ ಎರಡು ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಸಿಗದಿದ್ದರೂ ಸಹ ರಾಜ್ಯ ಸರ್ಕಾರ ತನ್ನ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡ ಗುರಿ ತಲುಪಲಿದೆ ಎಂದು ಮಾಂಝಿ ಹೇಳಿದ್ದಾರೆ.


SCROLL FOR NEXT