ನವದೆಹಲಿ: ವ್ಯಾಪಾರ ಸೌಲಭ್ಯ ಒಪ್ಪಂದಕ್ಕೆ ಸಂಬಂಧಿಸಿ ಉಂಟಾಗಿದ್ದ ಜಾಗತಿಕ ವಾಣಿಜ್ಯ ವಿವಾದ ಬಗೆಹರಿದಿರುವುದು ಅಮೆರಿಕ-ಭಾರತದ ನಡುವಿನ ವ್ಯಾಪಾರ ಮಾತುಕತೆಯ ಬಾಗಿಲು ತೆರೆದಂತಾಗಿದೆ.
ಈ ವಿವಾದ ಪರಿಹಾರಗೊಂಡ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಒಬಾಮ ಮುಂದಿನ ವರ್ಷದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಭಾರತಕ್ಕೆ ಬರಲು ಒಪ್ಪಿದ್ದಾರೆ. ಅಷ್ಟೇ ಅಲ್ಲದೆ, ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಲಿದ್ದಾರೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಮೈಕೆಲ್ ಫ್ರೋಮನ್ ತಿಳಿಸಿದ್ದಾರೆ.
ಭಾರತದಲ್ಲಿ ಮೊತ್ತ ಮೊದಲ ಉನ್ನತ ಮಟ್ಟದ ವ್ಯಾಪಾರ ಮಾತುಕತೆ ನಡೆಯಲಿದ್ದು ಫಾರ್ಮಾಸ್ಯುಟಿಕಲ್ ಮತ್ತು ಹಾಲಿವುಡ್ ಚಲನಚಿತ್ರಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕನ್ನು ಪಡೆಯುವ ಇರಾದೆಯನ್ನು ಅಮೆರಿಕ ಹೊಂದಿದೆ ಎಂದೂ ಪ್ರೋಮನ್ ಹೇಳಿದ್ದಾರೆ.
ಇದೇ ವೇಳೆ, ಮಂಗಳವಾರ ಫ್ರೋಮನ್ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.