ಕಠ್ಮಂಡು: ಪ್ರವಾಸದ ವೇಳೆ ಭಾರತದ ರು.1000 ಮತ್ತು ರು.500ರ ನೋಟುಗಳನ್ನು ಕೊಂಡೊಯ್ಯಲು ಈವರೆಗೆ ಇದ್ದ ನಿಷೇಧವನ್ನು ತೆಗೆದುಹಾಕಲು ನೇಪಾಳ ಮತ್ತು ಭಾರತ ಒಪ್ಪಿಕೊಂಡಿದೆ.
ಜತೆಗೆ, ಇನ್ನು ಮುಂದೆ ನೇಪಾಳದ ಪ್ರಜೆಗಳು ಭಾರತಕ್ಕೆ ಭೇಟಿ ನೀಡುವಾಗ ಹಾಗೂ ಭಾರತದ ಪ್ರಜೆಗಳು ನೇಪಾಳಕ್ಕೆ ಭೇಟಿ ನೀಡುವಾಗ ಗರಿಷ್ಠ ರು.25 ಸಾವಿರ ಮೌಲ್ಯದವರೆಗಿನ ಕರೆನ್ಸಿಗಳನ್ನು ಇಟ್ಟುಕೊಳ್ಳಲೂ ಅನುಮತಿ ಸಿಕ್ಕಿದೆ. ಇದರಿಂದ ಎರಡೂ ದೇಶಗಳ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದಾರೆ.