ನವದೆಹಲಿ: ಎಬೊಲಾ ರೋಗಕ್ಕೆ ತುತ್ತಾಗಿರುವ ದೇಶಗಳಿಂದ ಭಾರತಕ್ಕೆ ಹಿಂದಿರುಗುತ್ತಿರುವ ಪ್ರಯಾಣಿಕರು 'ನೋ ಎಬೋಲಾ' ಪ್ರಮಾಣಪತ್ರ ತರಬೇಕಾಗಿರುವುದು ಅಗತ್ಯ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ವಿಶ್ವಾದ್ಯಂತ ತಲ್ಲಣ ಮೂಡಿಸುತ್ತಿರುವ ಎಬೊಲಾ ರೋಗ ದಿನದಿಂದ ದಿನಕ್ಕೆ ತನ್ನ ರುದ್ರತಾಂಡವವನ್ನು ಹೆಚ್ಚಿಸುತ್ತಿದೆ. ಎಬೊಲಾ ನಿಯಂತ್ರಣಕ್ಕಾಗಿ ವಿಶ್ವದ ಹಲವಾರು ದೇಶಗಳು, ಅನೇಕ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಲ್ಲದೆ ಎಬೊಲಾ ಕುರಿತ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತವು ಸಹ ಹಲವು ನಿಯಂತ್ರಣ ಕ್ರಮಗಳನ್ನು ಕೊಂಗೊಂಡಿದೆ.
ಕಳೆದ ಕೆಲ ವಾರಗಳ ಹಿಂದೆ, ಲೈಬೀರಿಯಾದಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಎಬೊಲಾ ಪರೀಕ್ಷೆಗೊಳಪಡಿಸಿದಾಗ, ಆತನಲ್ಲಿ ಎಬೊಲಾ ರೋಗದ ವೈರಸ್‌ಗಳಿರುವುದು ಪತ್ತೆಯಾಯಿತು. ಪರೀಕ್ಷೆ ಬಳಿಕ ಆತನನ್ನು ಭಾರತಕ್ಕೆ ಪ್ರವೇಶ ನೀಡಲು ನಿರಾಕರಿಸಲಾಯಿತು.
ಈ ಮಧ್ಯೆ ಎಬೊಲಾ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಜೆಪಿ.ನಾಡ್ಡ, ಹೊರ ದೇಶಗಳಲ್ಲಿ ಎಬೊಲ ಚಿಕಿತ್ಸೆ ಪಡೆದು ಗುಣಮುಖರಾಗಿ ಬರುವ ಪ್ರಯಾಣಿಕರು, ಆಯಾ ದೇಶಗಳ ಆರೋಗ್ಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯದೇ ಭಾರತಕ್ಕೆ ಆಗಮಿಸುವುದು ಬೇಸರದ ಸಂಗತಿಯಾಗಿದೆ.
ಆದ್ದರಿಂದ ಎಬೊಲಾ ರೋಗಕ್ಕೆ ತುತ್ತಾಗಿರುವ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು, ಆಯಾ ರಾಷ್ಟ್ರಗಳ ಆರೋಗ್ಯ ಇಲಾಖೆಯಿಂದ 'ನೋ ಎಬೊಲಾ' ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಜೆಪಿ ನಾಡ್ಡ ತಿಳಿಸಿದ್ದಾರೆ.
ಅಲ್ಲದೆ ಎಬೊಲ ರೋಗಕ್ಕೆ ತುತ್ತಾಗಿ, ಚಿಕಿತ್ಸೆ ಪಡೆದು ಗುಣಮುಖರಾಗಿರುವವರು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದ ದಿನದಿಂದ 90 ದಿನಗಳವರೆಗೆ ಭಾರತಕ್ಕೆ ಆಗಮಿಸದಂತೆ ವಿನಂತಿಸಿಕೊಂಡಿರುವುದಾಗಿ ಅವರು ತಿಳಿಸಿದರು. ಅಲ್ಲದೆ ಎಬೊಲಾಗೆ ತುತ್ತಾಗಿರುವ ಪ್ರಮುಖವಾಗಿ ನೈಜಿರಿಯಾ, ಘಾನಾ, ನಿಯಾಮಿ, ಜವರಿಕೋಸ್ಟ್ ಸೇರಿದಂತೆ ಮುಂತಾದ ದೇಶಗಳ ರಾಯಭಾರಿ ಕಚೇರಿಗಳಿಗೆ ಈ ಕುರಿತು ಪತ್ರವನ್ನು ಬರೆಯಲಾಗಿದೆ ಎಂದು ನಾಡ್ಡ ತಿಳಿಸಿದರು.