ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ) 
ದೇಶ

ಭಾರತದಲ್ಲಿನ ದಾಳಿಗಳ ಹಿಂದೆ ಪಾಕ್ ಕೈವಾಡ: ರಾಜನಾಥ್ ಸಿಂಗ್

ಭಾರತದಲ್ಲಿ ನಡೆಯುವ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನ..

ಗುವಾಹತಿ: ಭಾರತದಲ್ಲಿ ನಡೆಯುವ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡ ಇದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರ ನೇರ ಆರೋಪ ಮಾಡಿದ್ದಾರೆ.

12 ಮಂದಿಯನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನಲ್ಲಿ ನಡೆದ ಗುಂಡಿನ ಕಾಳಗವನ್ನು ಪ್ರಸ್ತಾಪಿಸಿದ ಸಿಂಗ್, ದಾಳಿಯ ಹಿಂದೆ ಪಾಕ್ ಸರ್ಕಾರದ ಕೈವಾಡ ಇಲ್ಲ ಎನ್ನುವುದು ಸುಳ್ಳು ಎಂದಿದ್ದಾರೆ.

49ನೇ ಅಖಿಲ ಭಾರತ ಡಿಜಿಪಿ ಮತ್ತು ಐಜಿಪಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಪಾಕಿಸ್ತಾನದ ಐಎಸ್‌ಐ ಅನ್ನು ಉಗ್ರ ಸಂಘಟನೆ ಎಂದು ಘೋಷಿಸುವಂತೆ ಪಾಕಿಸ್ತಾನಕ್ಕೆ ಕೇಳಿಕೊಂಡರು.

ಉಗ್ರ ಸಂಘಟನೆಗಳಿಂದ ದೇಶದ ಭದ್ರತೆಗೆ ಧಕ್ಕೆಯಾಗಲಿದೆ. ಅಲ್-ಖೈದಾ ಉಗ್ರ ಸಂಘಟನೆ ತುಂಬಾ ಅಪಾಯಕಾರಿಯಾಗಿದ್ದು, ಅದನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಂಗ್ ತಿಳಿಸಿದರು.

ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಗೃಹ ಸಚಿವರು ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಡವರಿಗೆ 5 ಲಕ್ಷ ಉಚಿತ ಸೈಟ್, ರೈತ ಚೈತನ್ಯ: 100 ದಿನಗಳ ಆಡಳಿತ ಪೂರೈಸಿದ ಡಿ ಕೆ ಶಿವಕುಮಾರ್ ಸರ್ಕಾರದಿಂದ ಬಂಪರ್ ಗಿಫ್ಟ್ ಘೋಷಣೆ; Video

ರಾಮನಗರ: KPS ಶಾಲೆಯಲ್ಲಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಕ್ಲಾಸ್​ರೂಮ್, ಪೀಠೋಪಕರಣ ಭಸ್ಮ!

Cricket: 2027 ವಿಶ್ವಕಪ್‌ ಆಡ್ತೀರಾ?; ಕೊನೆಗೂ ಮೌನ ಮುರಿದ Rohit Sharma!

ಪೊಲೀಸ್ ವಾಹನ ಖರೀದಿಗೆ ಬ್ರೇಕ್? ಬಾಡಿಗೆ, ಲೀಸ್ ಮಾದರಿ ಪರಿಶೀಲನೆಗೆ ಕರ್ನಾಟಕ ಸರ್ಕಾರ ಚಿಂತನೆ!

ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿ, ಏಷ್ಯನ್ ಗೇಮ್ಸ್‌ನಿಂದ ಹರ್ಷಿತ್ ರಾಣಾ ಔಟ್; ಭಾರತ ತಂಡಕ್ಕೆ ಯಶ್ ಠಾಕೂರ್ ಎಂಟ್ರಿ!