ದೇಶ

ಉತ್ತರ ಪ್ರದೇಶದಲ್ಲಿ ಭೀಕರ ಸುಂಟರಗಾಳಿಗೆ14 ಬಲಿ

Mainashree

ಲಖನೌ: ಕಳೆದೆರಡು ದಿನಗಳಿಂದ ಉತ್ತರ ಪ್ರದೇಶದಲ್ಲಿ ಬೀಸುತ್ತಿರುವ ಪ್ರಬಲ ಸುಂಟರಗಾಳಿಗೆ 14 ಮಂದಿ ಬಲಿಯಾಗಿದ್ದಾರೆ.

ಲಖನೌ ಸೇರಿದಂತೆ ಇತರ ಪ್ರದೇಶದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಪ್ರಬಲ ಸುಂಟರಗಾಳಿ ಆವರಿಸಿದ್ದು, ಘಟನೆಯಲ್ಲಿ ಈವರೆಗೆ 14 ಮಂದಿ ಸಾವನ್ನಪ್ಪಿದ್ದರು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಲಖನೌನಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್‌ ಕಂಬಗಳು ಮತ್ತು ತಂತಿಗಳು ಹಾಗೂ 320ಕ್ಕೂ ಹೆಚ್ಚು ಜಾಹಿರಾತು ಫಲಕಗಳು ನೆಲಕ್ಕೆ ಉರುಳಿವೆ. ಕಳೆದ 20 ಗಂಟೆಗಳಿಂದ ಹಲವೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶದ ಹಲವೆಡೆ ಈಗ ಗೋಧಿ ಕಟಾವು ನಡೆಯುತ್ತಿದ್ದು, ಮಾವಿನ ಸೀಸನ್‌ ಕೂಡ ಪ್ರಾರಂಭವಾಗಿದೆ. ಸುಂಟರಗಾಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕಳೆವಾರವಷ್ಟೆ ಈ ಪ್ರದೇಶದಲ್ಲಿ ಆಲಿಕಲ್ಲು ಮಳೆ ಬಿದ್ದು, ಅರ್ಧದಷ್ಟು ಬೆಳೆ ನಾಶವಾಗಿತ್ತು, ಈಗ ಮತ್ತೆ ಸುಂಟರಗಾಳಿ ಅಪ್ಪಳಿಸಿದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ.

SCROLL FOR NEXT