ಮೋದಿ ಭೂಚಕ್ರ
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇದುವೇ ನನ್ನ ಮಂತ್ರ ಎಂದು ಪುನರುಚ್ಚರಿಸಿದ್ದಾರೆ ಪ್ರಧಾನಿ ಮೋದಿ....
ಬೆಂಗಳೂರು: ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇದುವೇ ನನ್ನ ಮಂತ್ರ ಎಂದು ಪುನರುಚ್ಚರಿಸಿದ್ದಾರೆ ಪ್ರಧಾನಿ ಮೋದಿ. ತಮ್ಮ ಸರ್ಕಾರಕ್ಕೆ ತಲೆನೋವಾಗಿದ್ದ ಭೂಸ್ವಾಧೀನ ಮಸೂದೆ ಟೀಕಾಕಾರರಿಗೆ ಪ್ರಬಲ ತಿರುಗೇಟು ನೀಡಿದ್ದಾರೆ. ಮಾತ್ರವಲ್ಲ, ಕೃಷಿಕರ ಪರವಾಗಿಯೇ ನಮ್ಮ ಸರ್ಕಾರವಿದೆ ಎಂದು ಪ್ರಬಲವಾಗಿ ಸಮರ್ಥಿಸಿಕೊಂಡರು. ಇಷ್ಟು ವರ್ಷ ಆಳಿದವರು ಏನು ಮಾಡಿದ್ದಾರೆ ಅನ್ನುವುದಕ್ಕಿಂತ ನಾವು ಕೃಷಿಗೆ ಹೆಚ್ಚು ಒತ್ತು ನೀಡಿದ್ದೇನೆ. ಕೃಷಿ ಅಭಿವೃದ್ಧಿಯನ್ನು ಮೂರು ಭಾಗ ಮಾಡಿಕೊಂಡು ಯೋಜನೆಯನ್ನು ರೂಪಿಸಿದ್ದೇನೆ
ಎಂದು ಮೋದಿ ಕೃಷಿ ನೀತಿಯನ್ನು ತೆರೆದಿಟ್ಟರು. ಗ್ರಾಮಗಳಲ್ಲಿ ರೈತರು ತಮ್ಮ ಮಕ್ಕಳಿಗೆ ಚಪರಾಸಿ ಕೆಲಸ ಕೊಡಿಸಲು ಲಂಚಕೊಡಲು ಜಮೀನು ಮಾರುತ್ತಿದ್ದರು. ಈಗ
ಆ ಜಮೀನುಗಳು ಎಲ್ಲಿ ಹೋದವು, ಯಾರ ಬಳಿ ಇವೆ ಎಂದು ಎಲ್ಲರಿಗೂ ಗೊತ್ತು. ಆದರೆ ನಮ್ಮ ಸರ್ಕಾರ ಗ್ರಾಮಗಳಲ್ಲೇ ರೈತರು ಉಳಿಯಲು ಕೃಷಿ ಯೋಜನೆ ಮಾಡಿದ್ದೇವೆ. ಅಲ್ಲಿಯೇ ಬೆಳೆದು ಮೌಲ್ಯ ಪಡೆಯಲು ನೆರವು ನೀಡುತ್ತೇವೆ. ಈಗ ಹೇಳಿ ಯಾವ ಸರ್ಕಾರ ರೈತರ ವಿರೋಧಿ ಎಂದು ಪ್ರಶ್ನಿಸಿ, ವಿರೋಧಪಕ್ಷಗಳಿಗೆ ತಿರುಗೇಟು ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.