ದೆಹಲಿ ಕೆಂಪು ಕೋಟೆ 
ದೇಶ

ದಿಲ್ಲಿ ದಾಳಿಗೆ ಸಂಚು?

ಕಾಶ್ಮೀರದ ಸಾಂಬಾದಲ್ಲಿ ನಡೆಸಿದ ದಾಳಿ ಮಾದರಿಯಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಫಿದಾಯೀನ್ (ಆತ್ಮಾಹುತಿ) ದಾಳಿಗೆ ಜೈಶ್-ಎ- ಮೊಹಮ್ಮದ್ ಉಗ್ರರು ...

ನವದೆಹಲಿ: ಕಾಶ್ಮೀರದ ಸಾಂಬಾದಲ್ಲಿ ನಡೆಸಿದ ದಾಳಿ ಮಾದರಿಯಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಫಿದಾಯೀನ್ (ಆತ್ಮಾಹುತಿ) ದಾಳಿಗೆ ಜೈಶ್-ಎ- ಮೊಹ
ಮ್ಮದ್ ಉಗ್ರರು ಸಂಚು ರೂಪಿಸಿದ್ದಾರೆ. ಸಾಂಬಾದಲ್ಲಿ ಠಾಣೆ ಹಾಗೂ ಸೈನಿಕ ಶಿಬಿರದ ಮೇಲೆ ನಡೆಸಿದ ದಾಳಿ ವೇಳೆ ಮೃತಪಟ್ಟ ಉಗ್ರನೊಬ್ಬನಿಂದ ವಶಕ್ಕೆ ತೆಗೆದುಕೊಂಡ
ದಾಖಲೆಯಿಂದ ಈ ವಿಚಾರ ಬಹಿರಂಗ ವಾಗಿದೆ. ಅದರಂತೆ ಕೇಂದ್ರೀಯ ಭದ್ರತಾ ಸಂಸ್ಥೆಗಳು ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ದೆಹಲಿ ಪೋಲೀಸರಿಗೆ ಸಲಹೆ
ನೀಡಿವೆ. ಮಾ.19, 20ರಂದು 4 ಉಗ್ರರು ಸಾಂಬಾದಲ್ಲಿ ಎರಡು ಕಡೆ ಆತ್ಮಾಹುತಿ ದಾಳಿ ನಡೆಸಿದ್ದರು. ಘಟನೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು. ಈ ವೇಳೆ ಮೃತ ಉಗ್ರನೊಬ್ಬನಿಂದ `ನಾವು ಮುಂದೆ ದೆಹಲಿಯಲ್ಲಿ ಭೇಟಿಯಾಗೋಣ' ಎನ್ನುವ ಚೀಟಿ ಸಿಕ್ಕಿತ್ತು. ಅದನ್ನು ಆಧರಿಸಿ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ಗುಪ್ತಚರ ಸಂಸ್ಥೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!