ದೇಶ

ಮುಸ್ಲಿಂ ನಾಯಕರಿಂದ ಪ್ರಧಾನಿ ಭೇಟಿ, ಭಯೋತ್ಪಾದನೆ, ಶಿಕ್ಷಣ ಕುರಿತು ಚರ್ಚೆ

Lingaraj Badiger

ನವದೆಹಲಿ: 11 ಹಿರಿಯ ಮುಸ್ಲಿಂ ನಾಯಕರನ್ನೊಳಗೊಂಡ ನಿಯೋಗ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಮುದಾಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದರು.

ಮೂಲಗಳ ಪ್ರಕಾರ, ತಮ್ಮ ಸಮುದಾಯದ ಕುರಿತು ಪ್ರಧಾನಿ ತೋರಿದ ಕಳಕಳಿ ಬಗ್ಗೆ ಮುಸ್ಲಿಂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ. ಹಲವು ವಿಷಯಗಳಿಗೆ ವಿಶೇಷವಾಗಿ ಶಿಕ್ಷಣ ಸಹಕಾರ ನೀಡುವಂತೆ ಮೋದಿಗೆ ಮನವಿ ಮಾಡಿದ್ದಾರೆ.

ಪ್ರಧಾನಿ ಹಾಗೂ ಮುಸ್ಲಿಂ ನಾಯಕ ಭೇಟಿ ವೇಳೆ ಭಯೋತ್ಪಾದನೆ ಕುರಿತು ಸಹ ಚರ್ಚೆ ನಡೆಯಿತು ಎನ್ನಲಾಗಿದೆ. ಅಲ್ಲದೆ ಮೋದಿ ಸರ್ಕಾರಕ್ಕೆ ತಮ್ಮ ಸಮುದಾಯ ಸಹಕಾರ ನೀಡಲಿದೆ ಎಂದು ಮುಸ್ಲಿಂ ನಾಯಕರು ಪ್ರಧಾನಿಗೆ ಭರವಸೆ ನೀಡಿದ್ದಾರೆ.

ಇನ್ನು ಪ್ರಧಾನಿ ಮೋದಿ ಸಹ, ಮುಸ್ಲಿಂ ಸಮುದಾಯಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಹಾಗೂ ಸಮುದಾಯ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

SCROLL FOR NEXT