ವಾರಾಣಸಿ: ಬಹುಶಃ ಉತ್ತರಪ್ರದೇಶದ ಈ ಪುಟ್ಟಗ್ರಾಮ ಬದ್ವಾಪುರದ ಜನ ಇಂಥದ್ದೊಂದು ಮದುವೆ ಬಗ್ಗೆ ಕೇಳಿದ್ದು ಇದೇ ಮೊದಲು. ಹಾಗಾಗಿ ಬಾಲಿವುಡ್
ಶೈಲಿಯ, ಈ ಅಪರೂಪದ ಮದುವೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ವರನೇನೋ ತಾಳಿ ಕಟ್ಟಲು ಸಿದ್ಧನಾಗಿ ಕೂತಿದ್ದ. ಹುಡುಕಿದರೂ ನೆರೆದವರ ಕಣ್ಣಿಗೆ ಮಾತ್ರ ವಧು ಕಾಣಿಸಲೇ ಇಲ್ಲ. ಆದರೆ, ಯುವಕನಾಗಲಿ, ಆತನ ಕುಟುಂಬದವರಿಗಾಗಲಿ ಈ ಕುರಿತ ಚಿಂತೆಯೇ ಇರಲಿಲ್ಲ. ಇನ್ನೇನು ತಾಳಿ ಕಟ್ಟುವ ಶಾಸ್ತ್ರಕ್ಕೆ ಕೆಲವೇ ಕ್ಷಣ ಇದೆ ಎನ್ನುವಾಗ ಪೋ ಲೀಸರು ಮಧ್ಯಪ್ರವೇಶಿಸಿ ಮದುವೆ ರದ್ದು ಮಾಡುತ್ತಾರೆ. ಗ್ರಾಮದ ಜನ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹಿಡಿ
ಶಾಪ ಹಾಕಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಾರೆ!
ಅಷ್ಟಕ್ಕೂಯುವಕ ಮದುವೆಯಾ ಗಲು ಹೊರಟಿದ್ದು ಯಾರನ್ನು ಗೊತ್ತಾ? ನಾಗಿಣಿಯನ್ನು! ಅಚ್ಚರಿಯಾದರೂ ನಿಜ. ಇದು ನಾಗ- ನಾಗಿಣಿಯ ಮದುವೆ. 27 ವರ್ಷದ ಸಂದೀಪ್ ಪಟೇಲ್ ತನ್ನನ್ನು ತಾನು ಇಚ್ಛಾಧಾರಿ ನಾಗ(ಮನುಷ್ಯ ರೂಪ ತಾಳಬಲ್ಲ ನಾಗರಹಾವು) ಎಂದೇ ಹೇಳಿಕೊಳ್ಳುತ್ತಿದ್ದ. ಹಿಂದಿನ ಜನ್ಮದಲ್ಲಿ ಆತ ಇಚ್ಛಾಧಾರಿ ನಾಗ ಆಗಿದ್ದನಂತೆ. ಇತ್ತೀಚೆಗೆ ಸ್ಥಳೀಯ ಶಿವ ದೇಗುಲದಲ್ಲಿ ಆತ ನಾಗಿಣಿಯೊಬ್ಬಳನ್ನು ಭೇಟಿಯಾಗಿದ್ದನಂತೆ. ಹಾಗಾಗಿ ಅದೇ ದೇಗುಲದಲ್ಲಿ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಈ ಮದುವೆಗೆ ಸಂದೀಪ್‍ನ ಕುಟುಂಬದವರ ಬೆಂಬಲವೂ ಇತ್ತು. ಆದರೆ, ಯಾವಾಗ ಪೊಲೀಸರ ಕೈಗೆ ಈತನ ವೈದ್ಯಕೀಯ ವರದಿ ಸಿಕ್ಕಿತೋ ತಡಮಾಡದೆ ಅವರು ದೇವಸ್ಥಾನದತ್ತ ದೌಡಾಯಿಸಿಮದುವೆ ರದ್ದು ಮಾಡಿದ್ದಾರೆ. ಯಾಕೆಂದರೆ ವೈದ್ಯಕೀಯ ವರದಿಗಳ ಪ್ರಕಾರ ಯುವಕ ಮಾನಸಿಕ ರೋಗಿ!