ಬೆಂಗಳೂರು: ಮಂಗಳಯಾನದ ಯಶಸ್ಸಿನ ರೂವಾರಿಗಳಲ್ಲಿ ಒಬ್ಬರಾಗಿರುವ ಡಾ.ಅಣ್ಣಾದೊರೈ ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದಾರೆ. ಎಸ್.ಕೆ.ಶಿವಕುಮಾರ್ ಅವರು ಈ ಸ್ಥಾನದಲ್ಲಿದ್ದರು. 1982ರಲ್ಲಿ ಇಸ್ರೋಗೆ ಸೇರಿದ ಅವರು ಟೀಮ್ ಲೀಡರ್ ಆಗಿ ತಮ್ಮ ವೃತ್ತಿ ಜೀವನ ಆರಂಬಿsಸಿದ್ದರು. 1992 ರಿಂದ 2005ರ ವರೆಗಿನ ಅವಧಿಯಲ್ಲಿ
ಸ್ಯಾಟಲೈಟ್ ಸಿಮ್ಯು ಲೇಟರ್‍ಗೆ ಸಂಬಂಧಿಸಿದ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಅಣ್ಣಾದೊರೈ ಮುಖ್ಯ ಭೂಮಿಕೆ ವಹಿಸಿದ್ದರು. ಇದರ ಜತೆಗೆ ಇಸ್ರೋ ಕೈಗೊಂಡಿದ್ದ ಚಂದ್ರಯಾನ-1ರಲ್ಲಿಯೂ ಪ್ರಮುಖವಾಗಿ ಪಾಲ್ಗೊಂಡಿದ್ದರು. 2011ರಲ್ಲಿ ಇಂಡಿಯನ್ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ ಮತ್ತು ಸ್ಮಾಲ್ ಸ್ಯಾಟಲೈಟ್ ಸಿಸ್ಟಮ್ ಯೋಜನೆಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು.