ದೇಶ

ಎನ್ ಕೌಂಟರ್ ಅನಿವಾರ್ಯವಾಗಿತ್ತು: ಪೊಲೀಸ್ ಆಯುಕ್ತ ರಾಮುಡು

Srinivasamurthy VN

ಹೈದರಾಬಾದ್: ಇನ್ನು ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ಕುರಿತಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾಹಿತಿ ನೀಡಿರುವ ಡಿಜಿ-ಐಜಿಪಿ ಜೆ ವಿ ರಾಮುಡು ಅವರು ಎನ್ ಕೌಂಟರ್ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ ರಾಮುಡು ಅವರು, ಎನ್ ಕೌಂಟರ್ ಕುರಿತ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಭೇಟಿ ವೇಳೆ ರಾಜ್ಯದ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಲು ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇತ್ತು. ರಾಜ್ಯದ ಪ್ರಕೃತಿ ಸಂಪತ್ತನ್ನು ರಕ್ಷಿಸಲೆಂದು ಎನ್ ಕೌಂಟರ್ ಮಾಡಲಾಗಿದೆ ಎಂದು ರಾಮುಡು ಅವರು ಎನ್ ಕೌಂಟರ್ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ ಈ ಎನ್ ಕೌಂಟರ್ ನಿಂದಾಗಿ ಕೇವಲ ರಕ್ತ ಚಂದನ ಕಳ್ಳಸಾಗಣೆದಾರರಷ್ಟೇ ಅಲ್ಲದೇ ಅರಣ್ಯ ಸಂಪತ್ತನ್ನು ಲೂಟಿ ಮಾಡಬೇಕು ಎನ್ನುವ ಎಲ್ಲ ಸ್ಮಗ್ಲರ್ ಗಳಿಗೂ ಎಚ್ಚರಿಕೆ ಸಂದೇಶ ರವಾನೆಯಾದಂತಾಗಿದೆ ಎಂದು ರಾಮುಡು ಅವರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT