ನವದೆಹಲಿ: ಯಾರಾದರೂ ನಿಮಗೆ ಗಿಫ್ಟ್ ಕೊಟ್ಟು ಕೆಲ ತಿಂಗಳ ನಂತರ ವಾಪಸ್ ಕೇಳಿದರೆ ಹೇಗನಿಸುತ್ತದೆ? ಬಹುಶಃ ಅಂಥ ಮುಜುಗರಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಈಗ ಕೇಜ್ರಿವಾಲರ ಸ್ಠಿತಿಯೂ ಹೀಗೇ ಆಗಿದೆ. ಮೊದಲು ತನ್ನ ನಾಯಕ ಕಾರಿನಲ್ಲಿ ಓಡಾಡಲಿ ಎಂದು ತನ್ನ ಕಾರನ್ನೇ ದಾನ ಮಾಡಿದ ಕೇಜ್ರಿ ಅಭಿಮಾನಿ, ಈಗ ನನ್ನ ಕಾರು ನನಗೆ ವಾಪಸ್ ಕೊಡಯ್ಯ ಎಂದಿ ದ್ದಾನೆ. ಅನಿವಾಸಿ ಭಾರತೀಯ ಕುಂದನ್ ಶರ್ಮಾ , ಕೇಜ್ರಿ ಅಬ್ಬರವನ್ನು ಟಿವಿಯಿಂದಲೇ ನೋಡಿ ಆಕರ್ಷಿತನಾಗಿ, ಕೇಜ್ರಿ ಕಾರ ಲ್ಲಿ ಓಡಾಡಲಿ ಎಂದು ತನ್ನ ಹೆಂಡತಿಯ ಹೆಸರಿನಲ್ಲಿದ್ದ ವ್ಯಾಗನಾರ್ ಕಾರನ್ನು ದಾನ ಮಾಡಿದ್ದ. ಕಾರ್ ಕೊಡುವಾಗ ಸ್ವತಃ ಕೇಜ್ರಿಯೊಂದಿಗೇ ಮಾತಾಡಿದ್ದ. ದೆಹಲಿ ಯಲ್ಲಿ ಕೇಜ್ರಿವಾಲ್ ಸರ್ಕಾರ ಬಂದಾಗ ಬಹಳ ಖುಷಿ ಪಟ್ಟಿದ್ದ ಇದೇ ಕುಂದನ್ ಶರ್ಮಾ , ದೆಹಲಿಯಲ್ಲಿನ ಆಪ್ ಹುಚ್ಚಾಟ ಮತ್ತು ಕೇಜ್ರಿವಾಲರ ಅಸಮರ್ಥ ನಾಯಕ ತ್ವವನ್ನು ಕಂಡು ಬೇಸತ್ತು ಈಗ `ನಾನು ಕೊಟ್ಟಿದ್ದ ವ್ಯಾಗನಾರ್ ಕಾರು ಮತ್ತು ಪಕ್ಷಕ್ಕೆ ನೀಡಿದ್ದ ದೇಣಿಗೆ ವಾಪಸ್ ಕೊಡ್ರಿ' ಎಂದು ಟ್ವೀಟ್ ಮಾಡಿದ್ದಾನೆ. ನನ್ನ ದೇಣಿಗೆಗೆ ಇವರು ಸಮರ್ಥರಲ್ಲ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾನೆ.