ಯಾಕೂಬ್ ಅಬ್ದುಲ್ ರಜಾಕ್ ಮೆಮೊನ್‌ 
ದೇಶ

ಮುಂಬೈ ಸರಣಿ ಸ್ಫೋಟ: ಮಾಸ್ಟರ್ ಮೈಂಡ್ ಯಾಕೂಬ್ 'ಗಲ್ಲು' ಎತ್ತಿಹಿಡಿದ ಸುಪ್ರೀಂ

ಗಲ್ಲು ಶಿಕ್ಷೆಯ ತೀರ್ಪು ಪುನರ್ ಪರಿಶೀಲಿಸುವಂತೆ ಕೋರಿ 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಅಬ್ದುಲ್...

ನವದೆಹಲಿ: ಗಲ್ಲು ಶಿಕ್ಷೆಯ ತೀರ್ಪು ಪುನರ್ ಪರಿಶೀಲಿಸುವಂತೆ ಕೋರಿ 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮೊನ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ವಜಾಗೊಳಿಸಿದ್ದು, ಯಾಕೂಬ್ ಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಗುರುವಾರ ಎತ್ತಿ ಹಿಡಿದಿದೆ.

ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಯಾಕೂಬ್ ನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಆರ್. ದವೆ ಅವರ ನೇತೃತ್ವದ ತ್ರಿಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿತು.

2014ರ ಜೂನ್‌ 2ರಂದು ಮೆಮೊನ್‌ ಮರಣ ದಂಡನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇದಕ್ಕೂ ಮೊದಲು, 2013ರ ಮಾರ್ಚ್ 21ರಂದು ಕೆಳ ಹಂತದ ನ್ಯಾಯಾಲಯ ಮೆಮೊನ್‌ಗೆ ವಿಧಿಸಿದ್ದ ಮರಣ ದಂಡನೆಯನ್ನು ಎತ್ತಿ ಹಿಡಿದಿತ್ತು.

ಪ್ರಕರಣ ಸಂಬಂಧ 10 ಜನರಿಗೆ ಮರಣ ದಂಡನೆ ವಿಧಿಸಿ ಮಹಾರಾಷ್ಟ್ರದ ವಿಶೇಷ ಟಾಡಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ 10 ಜನರ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಜೀವಾವಧಿಗೆ ಪರಿವರ್ತಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ