ದೇಶ

ಅರವಿಂದ್ ಕೇಜ್ರಿವಾಲ್ ಒಬ್ಬ ಹೇಡಿ: ದೇವನೂರು ಮಹಾದೇವ

Mainashree

ಗುರ್‌ಗಾಂವ್: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಒಬ್ಬ ಹೇಡಿ ಎಂದು ಕರ್ನಾಟಕದ ದಲಿತ ಸಾಹಿತಿ ಮತ್ತು ವಿಚಾರವಾದಿ ದೇವನೂರು ಮಹಾದೇವ ಮಂಗಳವಾರ ಹೇಳಿದ್ದಾರೆ.

ಹರ್ಯಾಣದ ಗುರ್‌ಗಾಂವ್‌ನಲ್ಲಿ ಇಂದು ಆಯೋಜಿಸಿದ್ದ ಆಮ್‌ಆದ್ಮಿ (ಎಎಪಿ) ಪಾರ್ಟಿ ಬಂಡಾಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್‌ಭೂಷಣ್ ಅವರು ಕರೆದಿದ್ದ ಸ್ವರಾಜ್ ಸಂವಾದ್ ಸಮಾವೇಶದಲ್ಲಿ ದೇವನೂರು ಮಹಾದೇವ ಭಾಗವಹಿಸಿ ಕನ್ನಡದಲ್ಲಿಯೇ ಮಾತನಾಡಿ ಗಮನ ಸೆಳೆದರು.

ಎಎಪಿ ಅಧಿಕಾರಕ್ಕೆ ಬರಬಾರದಿತ್ತು, ಆದರೆ ಅಧಿಕಾರಕ್ಕೆ ಬಂದಿರುವ ಆಪ್ ಒಂದು ದುಸ್ವಪ್ನವಾಗಿದೆ. ದೇಶಕ್ಕೆ ಪ್ರಬಲ ವಿರೋಧ ಪಕ್ಷದ ಅನಿವಾರ್ಯವಿದ್ದು, ಆಪ್ ಆ ಸ್ಥಾನದಲ್ಲಿದ್ದರೆ ಚೆನ್ನಾಗಿರುತ್ತಿತ್ತು ಎಂದ ಅವರು, ದೆಹಲಿಯಲ್ಲಿ ಆಪ್ ಗೆಲವು ಇಂತಹ ಸ್ಥಿತಿಗೆ ತಂದಿಟ್ಟಿದ್ದು, ಜನತೆಯ ಕನಸು ದುಸ್ವಪ್ನವಾಗಿದೆ ಎಂದು ಹೇಳಿದ್ದಾರೆ.

ಆಪ್ ಬಲಿಪಶು ರಾಜಕಾರಣ ಮಾಡುತ್ತಿದೆ, ಚುನಾವಣೆಯಲ್ಲಿ ಆಪ್ ಸೋತಿದ್ದರೇ ಜಗತ್ತಿಗೇ ಮಾದರಿಯಾಗೋ ಪ್ರಯಾಗವಾಗಬಹುದಿತ್ತು, ಆದರೆ, ಆಪ್ ಸಾಕಷ್ಟು ಗೊಂದಲಗಳಲ್ಲಿದ್ದು, ತತ್ವ ಸಿದ್ದಾಂತಗಳನ್ನು ಮುರಿದು ಹಾಕಿದೆ ಎಂದು ಅವರು ಆರೋಪಿಸಿದ್ದಾರೆ.

ಏಪ್ರಿಲ್ 14 ಎಂದರೆ ಅದು ಮೂರ್ಖರಿಗೆ ಮಾತುಗಳು ಬಂದ ದಿನ ಎಂದು ಡಾ.ಅಂಬೇಡ್ಕರ್ ಅವರ ಜನ್ಮದಿನವನ್ನು ಬಣ್ಣಿಸಿದ ದೇವನೂರು ಮಹಾದೇವ ಸ್ವರಾಜ್ ಪಕ್ಷ ಸ್ಥಾಪನೆ ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ

SCROLL FOR NEXT