ಸಾಂದರ್ಭಿಕ ಚಿತ್ರ 
ದೇಶ

ನ್ಯೂಯಾರ್ಕ್‌ ಕೋರ್ಟ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಮಹಿಳೆ ನೇಮಕ

ನ್ಯೂಯಾರ್ಕ್‌ ಕ್ರಿಮಿನಲ್‌ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತ ಮೂಲದ ರಾಜರಾಜೇಶ್ವರಿ ಅವರು ನೇಮಕಗೊಂಡಿದ್ದಾರೆ...

ವಾಷಿಂಗ್ಟನ್‌ : ನ್ಯೂಯಾರ್ಕ್‌ ಕ್ರಿಮಿನಲ್‌ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತ ಮೂಲದ ರಾಜರಾಜೇಶ್ವರಿ ಅವರು ನೇಮಕಗೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಭಾರತ ಮೂಲದ ಮಹಿಳೆ ನ್ಯೂಯಾರ್ಕ್ ನ್ಯಾಯಾಲಾಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವುದು.


43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು. 16 ವರ್ಷದವರಿದ್ದಾಗ ಅಮೆರಿಕ ಸೇರಿದ ರಾಜರಾಜೇಶ್ವರಿ, ರಿಚ್ಮಂಡ್‌ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ಸಹಾಯಕ ಜಿಲ್ಲಾ ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

‘ಈ ನೇಮಕದಿಂದ ಹೆಚ್ಚು ಸಂತೋಷವಾಗಿದೆ. ಅನಿವಾಸಿಯೊಬ್ಬರಿಗೆ ಇಂಥ ಗಳಿಗೆಗಳು ಹೆಚ್ಚು ಸ್ಮರಣೀಯ. ಈ ನೇಮಕ ನನ್ನಂಥ ಅನೇಕರಿಗೆ ಪ್ರೇರಣೆ’ ಎಂದು ರಾಜರಾಜೇಶ್ವರಿ ಹೇಳಿದ್ದಾರೆ.

ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟುವೂ ಆಗಿರುವ ರಾಜರಾಜೇಶ್ವರಿ ಅವರು ಅಮೆರಿಕದಲ್ಲಿ ನಡೆಯುವ ಅನಿವಾಸಿ ಭಾರತೀಯರ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನವನ್ನೂ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!