ನವದೆಹಲಿ: ಕಳ್ಳಮಾರ್ಗವಾಗಿ ಕೆನಾಡ ತಲುಪಿದ್ದ 900 ವರ್ಷದಷ್ಟು ಹಳೆಯ, 12ನೇ ಶತಮಾನದ "ಶುಕ ಕನ್ನಿಕೆ 'ಶಿಲ್ಪವನ್ನು ಕೆನಡಾ ಪ್ರಧಾನಿ ಸ್ಠೀಫನ್ ಹಾರ್ಪರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದ್ದಾರೆ.
900 ವರ್ಷದಷ್ಟು ಹಳೆಯ 'ಶುಕ ಕನ್ನಿಕೆ' ಶಿಲ್ಪ ವಿಶ್ವಪ್ರಸಿದ್ಧ ಖಜುರಾಹೋ ದೇವಾಲಯದಿಂದ ನಾಪತ್ತೆಯಾಗಿತ್ತು. ಇದು ಕಳ್ಳಮಾರ್ಗದಿಂದ ಕೆನಡಾ ತಲುಪಿತ್ತು. ಕೆನಡಾದಲ್ಲಿ ಶುಕ ಕನ್ನಿಕೆ ಶಿಲ್ಪಕ್ಕೆ "ಪ್ಯಾರೆಟ್ ಲೇಡಿ' ಎಂದು ಹೆಸರಿಡಲಾಗಿತ್ತು. ಈಗ ಕೆನಡಾ ಪ್ರಧಾನಿ ಸ್ಠೀಫನ್ ಅರು ಮೋದಿ ಅವರಿಗೆ ಹಸ್ತಾಂತರಿಸಿದ್ದು, ಮೂರು ಅಡಿ ಎತ್ತರದ ಈ ಐತಿಹಾಸಿಕ ಶಿಲ್ಪವನ್ನು ಮೋದಿ ಭಾರತಕ್ಕೆ ತರಲಿದ್ದಾರೆ.
ಕೆನಡಾ ಸಂಸತ್ತಿನ ಗ್ರಂಥಾಲಯದ ಸಭಾಂಗಣದಲ್ಲಿ ಈ ಹಸ್ತಾಂತರ ಕಾರ‌್ಯಕ್ರಮ ನಡೆಯಿತು. ಅಲ್ಲದೇ, ಮೋದಿ ಅವರು ಜೈಪುರ ಮೂಲದ ಕಲಾವಿದ ವೀರೇಂದ್ರ ಬಂದು ಅವರು ರಚಿಸಿದ ಗುರುನಾನಕ್ ದೇವ್ ಅವರ ಅದ್ಭುತ ಚಿತ್ರಕಲಾಕೃತಿಯನ್ನು ಮೋದಿ ಅವರು ಹಾರ್ಪರ್ ಅವರಿಗೆ ಕೊಡುಗೆಯಾಗಿ ನೀಡಿದರು ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಎಸ್ ಅಕ್ಬರುದ್ದೀನ್ ಅವರು ಈ ವಿಷಯವನ್ನು ಟ್ವಿಟರ್ ನಲ್ಲಿ ಹೇಳಿದ್ದಾರೆ.
ವಿಶ್ವಪ್ರಸಿದ್ಧ ಖಜುರಾಹೋ ದೇವಾಲಯದಿಂದ ನಾಪತ್ತೆಯಾಗಿ, ಕಳ್ಳಮಾರ್ಗವಾಗಿ ಕೆನಡಾ ತಲುಪಿದ್ದ 900 ವರ್ಷದಷ್ಟು ಹಳೆಯ 'ಶುಕ ಕನ್ನಿಕೆ' ಶಿಲ್ಪವನ್ನು ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರು ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸುವ ಮೂಲಕ ಸೌಹಾರ್ದತೆ ತೋರಿದರು. ಕಲಾವಿದನ ನೈಪುಣ್ಯಕ್ಕೆ ಸಾಕ್ಷಿಯಾಗಿರುವ, ಕ್ಷಣಾರ್ಧದಲ್ಲಿಯೇ ನೋಡುಗರನ್ನು ಮಂತ್ರಮುಗ್ಧಗೊಳಿಸುವ ಮೂರು ಅಡಿ ಎತ್ತರದ ಈ ಐತಿಹಾಸಿಕ ಶಿಲ್ಪ ಮೋದಿ ಅವರೊಂದಿಗೆ ಭಾರತ ಸೇರಲಿದೆ.
ನಾಪತ್ತೆಯಾಗಿದ್ದ 'ಶುಕ ಕನ್ನಿಕೆ' ಶಿಲ್ಪವು 2011ರಲ್ಲಿ ಕೆನಡಾದ ವ್ಯಕ್ತಿಯೊಬ್ಬನ ವಶದಲ್ಲಿರುವುದು ಪತ್ತೆಯಾಗಿತ್ತು. ಆತನಲ್ಲಿ ಇದರ ಒಡೆತನದ ಕುರಿತು ಯಾವುದೇ ದಾಖಲೆಪತ್ರಗಳು ಇರದ ಕಾರಣ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದರು. 1970ರ ಯುನೆಸ್ಕೋ ಸಮಾವೇಶದ ನಿಯಮಗಳ ಅನುಸಾರ 'ಪ್ಯಾರಟ್ ಲೇಡಿ' (ಶುಕ ಕನ್ನಿಕೆ) ಎಂದು ಹೆಸರಿಡಲಾಗಿತ್ತು.