ದೇಶ

ಟೈಮ್ಸ್ ನಿಂದ ಮತ್ತೆ ಮೋದಿ ಗುಣಗಾನ

Mainashree

ನ್ಯೂಯಾರ್ಕ್: ಟೈಮ್ ಮ್ಯಾಗಜಿನ್ ಪ್ರಕಟಿಸಿದ ನೂರು ಶ್ರೇಷ್ಠರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದ ನರೇಂದ್ರ ಮೋದಿ ಸಾಧನೆಯನ್ನು ಅದೇ ಪತ್ರಿಕೆಯ ಕಳೆದ ಸಂಚಿಕೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಲೇಖನ ಬರೆದು ಕೊಂಡಾದಿದ್ದರು. ಈ ಬಾರಿಯ ಸಂಚಿಕೆಯಲ್ಲಿ ಟೈಮ್ಸ್ ಮೋದಿಯನ್ನು ಮತ್ತೊಮ್ಮೆ ಪ್ರಶಂಸಿಸಿದೆ. ಚೀನಾ ಮತ್ತು ಭಾರತಕ್ಕೆ ಅತ್ಯಂತ ಉತ್ಸಾಹಿ ಮತ್ತು ಶಕ್ತಿಶಾಲಿ ನಾಯಕರ ಮುಂದಾಳತ್ವ ಸಿಕ್ಕಿದೆ. ಈ ಇಬ್ಬರೂ ನಾಯಕರಿಗೆ ತ್ವರಿಗತಿಯಲ್ಲಿ ತಮ್ಮ ಛಾಪನ್ನು ಮೂಡಿಸಿ ಇತಿಹಾಸದಲ್ಲಿ ಸ್ಥಾನ ಪಡೆಯುವ ಅದಮ್ಯ ಉತ್ಸಾಹವಿದೆ ಎಂದು ಹೊಗಳಿರುವ ಟೈಮ್ಸ್ ಮ್ಯಾಗಜಿನ್, ಮನಮೋಹನ್ ಸಿಂಗ್‍ರ 10 ವರ್ಷಗಳ ಆಡಳಿತ ನೆನಪಿಟ್ಟುಕೊಳ್ಳುವುದಕ್ಕೂ ಯೋಗ್ಯವಿರಲಿಲ್ಲವೆಂದು ಟೀಕಿಸಿದೆ. ಏಷ್ಯಾ ದೇಶಗಳು ಹಲವು ವರ್ಷಗಳ ನಿಷ್ಪ್ರಯೋಜಕ ನಾಯಕತ್ವದ ನಂತರ ಇದೀಗ ಶಕ್ತಿಶಾಲಿ ಕೈಗಳಲ್ಲಿ ಸಿಕ್ಕಿದೆ ಎಂದು ಮೋದಿ, ಚೀನಾ ಅಧ್ಯಕ್ಷ ಜಿನ್‍ಪಿಂಗ್‍ರ ಆಡಳಿತ ವೈಖರಿಯನ್ನು ಹಾಡಿಹೊಗಳಿದೆ.

SCROLL FOR NEXT