ನರೇಂದ್ರ ಮೋದಿ 
ದೇಶ

ಪ್ರಧಾನಿ ಮೋದಿ ಕನಸಾದ ಸ್ವಚ್ಛ ಭಾರತ್ ಜಾಹಿರಾತಿಗೆ ಬರೋಬ್ಬರಿ 200 ಕೋಟಿ!

ಭಾರತವನ್ನು ಸ್ವಚ್ಛ ದೇಶವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಛ ಭಾರತ್ ಅಭಿಯಾನವನ್ನು ಚುರುಕುಗೊಳಿಸಲು...

ನವದೆಹಲಿ: ಭಾರತವನ್ನು ಸ್ವಚ್ಛ ದೇಶವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಛ ಭಾರತ್ ಅಭಿಯಾನವನ್ನು ಚುರುಕುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಭಿಯಾನದ ಜಾಹಿರಾತಿಗಾಗಿ ಬರೋಬ್ಬರಿ 20 ಕೋಟಿ ರುಪಾಯಿಯನ್ನು ವಿನಿಯೋಗಿಸಲಿದೆ.

ಸ್ವಚ್ಛ ಭಾರತ್ ಅಭಿಯಾನ ಯೋಜನೆಗೆ ಪರಿಣಾಮಕಾರಿಯಾಗಿ ಪ್ರಚಾರ ನೀಡಬೇಕೆಂಬ ಉದ್ದೇಶ ಹಾಗೂ ಹಳ್ಳಿ ಹಳ್ಳಿಯಲ್ಲಿಯೂ ಜಾಹಿರಾತು ನೀಡಲು ಬರೋಬ್ಬರಿ 200 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಅಕ್ಟೋಬರ್ ನಲ್ಲಿ ಮೋದಿ ಅವರು ಪ್ರಾರಂಭಿಸಿದ ಈ ಯೋಜನೆಗೆ ಹೆಚ್ಚು ಪರಿಣಾಮಕಾರಿ ತನರಿಗೆ ತಲುಪಿಸುವ ಉದ್ದೇಶದಿಂದಾಗಿ ಜಾಹಿರಾತುಗಳು ಜನರನ್ನು  ಹೆಚ್ಚು ಆಕರ್ಷಿಸುವಂತೆ ಮಾಡಲು ಸರ್ಕಾರ ನಿರ್ಧರಿಸಿದ್ದು ಈಗಾಗಲೇ  12 ಜಾಹಿರಾತು ಸಂಸ್ಥೆಗಳ ಜೊತೆ ಪಿಎಂಓ ಸ್ವಚ್ಛ ಭಾರತದ ಜಾಹಿರಾತಿನ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹನ್ನೇರಡು ಜಾಹಿರಾತು ಸಂಸ್ಧೆಗಳ ಪೈಕಿ ಅಂತಿಮವಾಗಿ  ಒಂದು ಸಂಸ್ಥೆಯನ್ನು ಆಯ್ಕೆ ಮಾಡಲಿದ್ದು, ಅತ್ಯಂತ ವಿಭಿನ್ನವಾದ ಹಾಗೂ ಜನಾಕರ್ಷಣೀಯವಾದ ಈ ಹಿಂದೆ ಬಂದಿರುವ ಎಲ್ಲಾ ಸರ್ಕಾರಿ ಜಾಹಿರಾತುಗಳಿಗಿಂತ ಭಿನ್ನವಾಗಿರುವಂತ ಜಾಹಿರಾತು ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ 200ಕೋಟಿ ರೂಪಾಯಿಗಳನ್ನು ತೆಗೆದಿರಿಸಲು ನಿರ್ಧರಿಸಲಾಗಿದೆ ಎಂದು ಪ್ರಸಾರಣಾ (ಐ&ಬಿ) ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ