ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ 
ದೇಶ

ಕೇಂದ್ರ ಸಚಿವ ಪಾರಿಕ್ಕರ್ ನಿವಾಸ ಶೋಧಕ್ಕೆ ತಡೆಯಾಜ್ಞೆ

ಅಪರಾಧಿಯೊಬ್ಬನ ಪತ್ತೆಗಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರ ದೆಹಲಿ ನಿವಾಸ ಶೋಧಕ್ಕಾಗಿ ಸ್ಥಳೀಯ ಜೆಎಂಎಫ್‌ಸಿ...

ಪಣಜಿ: ಅಪರಾಧಿಯೊಬ್ಬನ ಪತ್ತೆಗಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರ ದೆಹಲಿ ನಿವಾಸ ಶೋಧಕ್ಕಾಗಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ಸರ್ಚ್‌ವಾರೆಂಟ್ ಆದೇಶಕ್ಕೆ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

2006ರಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿದ್ದ ಗೋವಾದ ಮಾಜಿ ಸಚಿವ ಫ್ರಾನ್ಸಿಸ್ಕೋಮಿಕ್ಕಿ ಪಚೇಕೋ ಅವರು ದೆಹಲಿಯಲ್ಲಿರುವ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ 10 ಅಕಬರ್ ರಸ್ತೆಯ ಪಾರಿಕ್ಕರ್ ಅವರ ಮನೆಯ ಶೋಧಕ್ಕೆ ಸರ್ಚ್ ವಾರೆಂಟ್ ಆದೇಶ ಹೊರಡಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಗೋವಾ ಸರ್ಕಾರ ರಕ್ಷಣಾ ಸಚಿವರ ಮನೆ ಶೋಧನೆ ಮಾಡಬಾರದು, ಇದು ರಕ್ಷಣಾ ಇಲಾಖೆಯ ಆಸ್ತಿ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಇದರ ಅನ್ವಯ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕೈಗಾರಿಕಾ ಅಭಿವೃದ್ಧಿಗೆ 5 ನಗರಗಳನ್ನು ಗುರುತಿಸಲು ಅಧಿಕಾರಿಗಳಿಗೆ CM DK Shivakumar ನಿರ್ದೇಶನ

ವಾಲ್ಮೀಕಿ ಹಗರಣದ 'ಕಿಂಗ್ ಪಿನ್' ನಾಗೇಂದ್ರ ಔಟ್: ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾದ ಭ್ರಷ್ಟ ಕಾಂಗ್ರೆಸ್ ಸರ್ಕಾರ! ಬಿಜೆಪಿ

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!