ಡೆಹರಾಡೂನ್: ಕೇದಾರನಾಥೇಶ್ವರನ ಬಳಿ ತನ್ನ ರಾಜಕೀಯ ಜೀವನಕ್ಕಾಗಿ ಏನನ್ನೂ ಬೇಡಲಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
57 ದಿನಗಳ ವಿದೇಶ ಪ್ರವಾಸ ಮುಗಿಸಿ ವಾಪಸ್ ಬಂದಿರುವ ಕಾಂಗ್ರೆಸ್ ಯುವರಾಜ ರಾಹುಲ್ ನಿನ್ನೆ ಹಿಮಾಲಯ ತಪ್ಪಲಿನಲ್ಲಿರುವ ಚಾರ್ ಧಾಮ್ ಗಳಲ್ಲಿ ಒಂದಾಗಿರುವ ಕೇದಾರನಾಥ ದೇವಾಲಯಕ್ಕೆ ತೆರಳಿದ್ದರು. ರಾತ್ರಿಯಿಡಿ ಗೌರಿಕುಂಡ್ ನಲ್ಲಿದ್ದ ರಾಹುಲ್, ಇಂದು ಬೆಳಗ್ಗೆ 8.30ಕ್ಕೆ ಪುರಾಣ ಪ್ರಸಿದ್ಧ ದೇಗುಲಕ್ಕೆ ತೆರಳಿ ಕೇದಾರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು ದೇವರ ಬಳಿ ತನಗಾಗಿ ಏನನ್ನೂ ಬೇಡಲಿಲ್ಲ. 2013 ರಲ್ಲಿ ಮೇಘಸ್ಫೋಟದಿಂದ ಉಂಟಾದ ದುರಂತದಲ್ಲಿ ಸಾವನ್ನಪ್ಪಿದವರಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು. ಕೇದಾರನಾಥೇಶ್ವರನ ದರ್ಶನಕ್ಕಾಗಿ ರಾಹುಲ್ ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ 16 ಕೀಮೀ ಪಾದಯಾತ್ರೆ ಮಾಡಿದ್ದರು.