ಅಶುತೋಷ್ 
ದೇಶ

ನಾನು ನಿನ್ನ ತಂದೆಯನ್ನು ರಕ್ಷಿಸಲಿಲ್ಲ ಎಂದು ಕಣ್ಣೀರಿಟ್ಟ ಆಪ್ ನಾಯಕ ಆಶುತೋಷ್

ಆಮ್ ಆದ್ಮಿ ಪಕ್ಷದ ಪ್ರತಿಭಟನಾ ರ್ಯಾಲಿಯ ವೇಳೆ ರಾಜಸ್ಥಾನ ಮೂಲದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಕುರಿತು ಅವರ ಮಗಳೊಂದಿಗೆ ಟಿವಿ ಮಾಧ್ಯಮದೊಂದಿಗೆ...

ನವದೆಹಲಿ: ಆಮ್ ಆದ್ಮಿ ಪಕ್ಷದ ಪ್ರತಿಭಟನಾ ರ್ಯಾಲಿಯ ವೇಳೆ ರಾಜಸ್ಥಾನ ಮೂಲದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಕುರಿತು ಅವರ ಮಗಳೊಂದಿಗೆ ಟಿವಿ ಮಾಧ್ಯಮದೊಂದಿಗೆ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಪ್ ನಾಯಕ ಆಶುತೋಷ್ ಅವರು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟ ಘಟನೆ ನಡೆಯಿತು.

'ನಾನು ತಪ್ಪಿತಸ್ಥ ಮೇಘಾ... ನಿನ್ನ ತಂದೆಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಎಂದು ಗಜೇಂದ್ರ ಸಿಂಗ್ ಅವರ ಪುತ್ರಿ ಮೇಘಾ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತ ಗೋಳೋ ಎಂದು ಅಶುತೋಷ್  ಬಿಕ್ಕಿ ಬಿಕ್ಕಿ ಅತ್ತರು.

ಇದೇ ವೇಳೆ ದಯಮಿಟ್ಟು ಗಜೇಂದ್ರ ಸಿಂಗ್ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಲ್ಲಿ ಅಶುತೋಷ್ ಮನವಿ ಮಾಡಿಕೊಂಡರು.

ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಬೆಳಗ್ಗೆಯಷ್ಟೇ ನನ್ನಿಂದ ತಪ್ಪಾಗಿದೆ. ಸಿಂಗ್ ಆತ್ಮಹತ್ಯೆ ಪ್ರಯತ್ನದ ನಂತರವೂ ಭಾಷಣ ಮುಂದುವರಿಸಿದ್ದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಮಾಪಣೆ ಕೋರಿದ ಬೆನ್ನಲ್ಲೇ ಮತ್ತೊಬ್ಬ ಮುಖಂಡ ಅಶುತೋಷ್ ಟಿವಿ ಚಾನೆಲ್ ಚರ್ಚೆಯ ಸಂದರ್ಭದಲ್ಲಿ ಸಿಂಗ್ ಮಗಳ ಜೊತೆ ಮಾತನಾಡುತ್ತ ಕಣ್ಣೀರಿಟ್ಟ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!