ದೇಶ

ಪುಣ್ಯಕೋಟಿ ನಾಡು ಭಾರತ ಗೋಮಾಂಸ ರಫ್ತಿನಲ್ಲಿ ನಂ.1!

Vishwanath S

ನವದೆಹಲಿ: ಪುಣ್ಯಕೋಟಿ ನಾಡಲ್ಲಿ ಗೋಮಾಂಸ ರಫ್ತಿನದ್ದೇ ಕಾರುಬಾರು...ಹೌದು, ಇದು ನಿಜಕ್ಕೂ ದುರಂತ! ಗೋವನ್ನು ದೇವರಂತೆ ಕಾಣುವ ಭಾರತದಲ್ಲೇ ಅತಿ ಹೆಚ್ಚು ಗೋಮಾಂಸ ರಫ್ತಾಗುತ್ತಿದ್ದು ಭಾರತ ವಿಶ್ವದ ನಂ.1 ದೇಶ ಎಂದು ಅಮೆರಿಕದ ಕೃಷಿ ಇಲಾಖೆ(ಯುಎಸ್‌ಡಿಎ) ಹೇಳಿದೆ.

ಭಾರತದ ಹಲವು ರಾಜ್ಯಗಳಲ್ಲಿ ದನ ಹಾಗೂ ಎತ್ತುಗಳನ್ನು ಹತ್ಯೆಯನ್ನು ಕಡ್ಡಾಯವಾಗಿ ನಿಷೇಧಿಸಿರುವ ಈ ಸಮಯದಲ್ಲೂ ಭಾರತದಿಂದ ಗೋಮಾಂಸ ರಫ್ತಿನಲ್ಲಿ ಏರಿಕೆಯಾಗಿದ್ದು, ಅತಿ ಹೆಚ್ಚು ದನದ ಮಾಂಸ ರಫ್ತು ಮಾಡುತ್ತಿರುವ ದೇಶ ಬ್ರೆಜಿಲ್ ಗಿಂತ ಮೇಲುಗೈ ಸಾಧಿಸಿದೆ. 2015ರಲ್ಲಿ ಜಾಗತಿಕ ಗೋಮಾಂಸ ರಫ್ತು ವ್ಯವಹಾರವು ದಾಖಲೆ 10.2 ಮೆಟ್ರಿಕ್ ಟನ್ ಗೆ ತಲುಪಲಿದೆಯೆಂದು ಭವಿಷ್ಯ ನುಡಿದಿದೆ. ಭಾರತದ ಕೋಣಗಳ ಮಾಂಸ ರಫ್ತು 13,56,794 ಟನ್‌ಗಳಾಗಿದ್ದು, ಅದರ ವೌಲ್ಯ ರೂ. 26,965 ಕೋಟಿ. ಇದು ಪ್ರಮಾಣದಲ್ಲಿ ಶೇ.13ರಷ್ಟು ಏರಿಕೆಯಾಗಿದೆ.

ಬ್ರೆಝಿಲ್‌ನ ಕರೆನ್ಸಿಯ ಅಪವೌಲ್ಯ ಹಾಗೂ ವಿಯೆಟ್ನಾಂನಿಂದ ಹಾಂಕಾಂಗ್‌ಗೆ ಕೋಣಗಳ ಮಾಂಸದ ಮರು-ರಫ್ತಿನ ಸಮಸ್ಯೆ ಭಾರತದ ರಫ್ತಿನ ಮೇಲೆ ಪರಿಣಾಮ ಬೀರಿದೆಯೆಂದು ಅಖಿಲ ಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಸಂಘದ ಕಾರ್ಯದರ್ಶಿ ಡಿ.ಬಿ.ಸಭರ್ವಾಲ್ ತಿಳಿಸಿದ್ದಾರೆ. ವಿಯೆಟ್ನಾಂ, ಭಾರತದ ಕೋಣಗಳ ಮಾಂಸದ ಅತಿದೊಡ್ಡ ಖರೀದಿದಾರನಾಗಿದ್ದರೆ, ಬ್ರೆಝಿಲ್ ಭಾರತದ ಪ್ರಧಾನ ಪ್ರತಿಸ್ಪರ್ಧಿಯಾಗಿದೆ.

SCROLL FOR NEXT