ದೇಶ

ದೇಶಾದ್ಯಂತ 120 ಕಾಮಧೇನು ನಗರ ನಿರ್ಮಾಣ: ಆರ್ ಎಸ್ ಎಸ್

Shilpa D

ನವದೆಹಲಿ: ಪವಿತ್ರ ಗೋಮಾತೆಯ ರಕ್ಷಣೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದೇಶಾದ್ಯಂತ 120 ಕಾಮಧೇನು ನಗರ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ.
ಗೋವುಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಅಪರಾಧ ಪ್ರಮಾಣ ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ ಎಂಬುದು ಆರ್ ಎಸ್ ಎಸ್ ಅಭಿಪ್ರಾಯ. ಜನವಸತಿ ಇರುವ ಸ್ಥಳದಲ್ಲೇ ಗೋಶಾಲೆ ನಿರ್ಮಾಣ ಮಾಡಿ ಅವುಗಳಿಗೆ ರಕ್ಷಣೆ ನೀಡಲು ಮುಂದಾಗಿದೆ.
ಗೋವುಗಳ ರಕ್ಷಣೆಗಾಗಿ ಶೆಡ್ ನಿರ್ಮಿಸಲು ಮಾತುಕತೆ ನಡೆಸಿದ್ದೇವೆ. ಗೋಶಾಲೆಗಾಗಿ ತಮ್ಮ ಜಮೀನು ಹಾಗೂ ತಾವು ವಾಸಿಸುವ ಸ್ಥಳಗಳಲ್ಲಿ ಜಾಗ ನೀಡಲು ಸ್ಥಳೀಯರು ಸಮ್ಮತಿಸಿರುವುದಾಗಿ ಅಖಿಲ ಭಾರತ ಗೋಸೇವಾ ಮುಖ್ಯಸ್ಥ ಶಂಕರ್ ಲಾಲ್ ತಿಳಿಸಿದ್ದಾರೆ.

ಇನ್ನೂ ಗೋಶಾಲೆಗಳಲ್ಲಿರುವ ಹಸುವಿನ ಹಾಲು, ಹಾಲಿವನ ಉತ್ಪನ್ನಗಳು, ಗೊಬ್ಬರಗಳಿಂದ ಸ್ಥಳೀಯರಿಗೆ ಹೆಚ್ಚಿನ ಉಪಯೋಗವಾಗಲಿದೆ. ಗೋಶಾಲೆ ನಿರ್ಮಾಣಕ್ಕಾಗಿ ಮದ್ಯ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ರಾಜಸ್ತಾನ ಗಳಲ್ಲಿ ಸುಮಾರು 100ನಿವೇಶನಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಸುಗಳ ರಕ್ಷಣೆಗಾಗಿ ಆರ್ ಎಸ್ ಎಸ್ 18 ಅಂಶಗಳ ಅಜೆಂಡಾ ಸಿದ್ದ ಪಡಿಸಿಕೊಂಡಿದೆ. ಈ ಗೋಶಾಲೆಗಳಲ್ಲಿ ದೇಶೀಯ ತಳಿಯ ಹಸುಗಳನ್ನು ಮಾತ್ರ ಸಾಕಲಾಗುವುದು. ಈ
ತಳಿಗಳ ಹಸುವಿನ ಹಾಲು ಕುಡಿಯುವ ಮಕ್ಕಳು ಸಾತ್ವಿಕರಾಗಿ ಬೆಳೆಯುತ್ತಾರೆ ಎಂಬುದು ಶಂಕರ್ ಲಾಲ್ ಅವರ ಅಭಿಪ್ರಾಯ. ಇನ್ನೂ  ಗೋಶಾಲೆ ತೆರೆಯೋದಕ್ಕೆ ಹಲವು ಉದ್ಯಮಿಗಳು ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.  ಇನ್ನು ದೇಶಾದ್ಯಂತ ಗೋಕುಲ ಗುರುಕುಲ ಎಂಬ 80 ವಸತಿ ಶಾಲೆ ಸ್ಥಾಪಿಸುವುದಾಗಿಯೂ ಅವರು

SCROLL FOR NEXT