ನವದೆಹಲಿ: ಖಾಸಗಿ ಕ್ಷೇತ್ರದ ಪ್ರತಿಭೆಗಳನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಎನ್‍ಡಿಎ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ.
ಸಿಂಗಾಪುರದ ಡಾಯಿಷ್ ಬ್ಯಾಂಕ್‍ನ ಗ್ಲೋಬಲ್ ಸ್ಟ್ರ್ಯಾಟಜಿಸ್ಟ್ ಸಂಜೀವ್ ಸನ್ಯಾಲ್, ಮಣಿಪಾಲ್ ಗ್ಲೋಬಲ್ ಎಜುಕೇಷನ್ ಮುಖ್ಯಸ್ಥ ಮತ್ತು ಇನ್ಫೋಸಿಸ್ ಮಂಡಳಿಯ ಮಾಜಿ ಸದಸ್ಯ ಟಿ.ವಿ.ಮೋಹನ್ ದಾಸ್ ಪೈ ಅವರನ್ನು ನೀತಿ ಆಯೋಗದ ಪೂರ್ಣಕಾಲಿಕ ಸದಸ್ಯರಾಗುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.
ಪ್ರಧಾನಿ ಮೋದಿ ಅವರ ಸ್ಮಾರ್ಟ್ ಸಿಟಿ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಸನ್ಯಾಲ್ ಅವರ ಪರಿಣತಿಯು ನೆರವಾಗಲಿದೆ ಎನ್ನುವುದು ಸರ್ಕಾರದ ಮೂಲಗಳ ಅಭಿಪ್ರಾಯ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸನ್ಯಾಲ್, ನನಗ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ ಎಂದಿದ್ದಾರೆ. ಪೈ ಅವರು ಕೂಡ ಇದೇ ಉತ್ತರ ನೀಡಿದ್ದಾರೆ.