ದೇಶ

ಮಡಿದವರ, ಕಾಣೆಯಾದವರ ಪಟ್ಟಿ ಬಿಡುಗಡೆ ಮಾಡಿದ ನೇಪಾಳ ಸರ್ಕಾರ

Vishwanath S

ನೇಪಾಳ: ಶನಿವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮಡಿದವರ ಹಾಗೂ ಬದುಕುಳಿದವರ, ವಿದೇಶಿಗರ ಹಾಗೂ ಇಲ್ಲಿ ನೆಲೆಸಿದ್ದವರ ಮಾಹಿತಿ ಪಟ್ಟಿಯನ್ನು ನೇಪಾಳ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.

ನೇಪಾಳದಲ್ಲಿದ್ದ ಭಾರತದ ಐವರು ಸಾವನ್ನಪ್ಪಿದ್ದು, ಒಟ್ಟು 1,417 ಮಂದಿ ಭಾರತೀಯರನ್ನು ನೇಪಾಳದಿಂದ ಸುರಕ್ಷಿತವಾಗಿ ಹೊರ ಕಳುಹಿಸಲಾಗಿದೆ.

ಆಸ್ಟ್ರೇಲಿಯಾ ದೇಶದ 549 ಮಂದಿ ನೇಪಾಳ ಪ್ರವಾಸಕ್ಕಾಗಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 200 ಮಂದಿ ಸುರಕ್ಷಿತರಾಗಿದ್ದಾರೆ. ಆದರೆ ಇನ್ನುಳಿದಂತೆ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದೆ.

ಇದೇ ವೇಳೆ ಆಸ್ಟ್ರಿಯಾದ 250 ಮಂದಿ ನೋಂದಣಿ ಮಾಡಿಸಿಕೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಬಾಂಗ್ಲಾದೇಶದ 14 ವರ್ಷದೊಳಗಿನ ಫುಟ್‌ಬಾಲ್ ತಂಡದ ಬಾಲಕಿಯರು ಸೇರಿ 50 ಮಂದಿ ಇದ್ದರು.

ನೇಪಾಳದಲ್ಲಿ ಎಷ್ಟು ಮಂದಿ ಬಾಂಗ್ಲಾದವರು ವಾಸವಾಗಿದ್ದರು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಚೀನಾ ದೇಶದ 4 ಮಂದಿ ಸಾವು, 10 ಮಂದಿಗೆ ಗಾಯಗಳಾಗಿವೆ. ಕೊಲಂಬಿಯಾದ 7 ಮಂದಿ ನಾಪತ್ತೆಯಾಗಿದ್ದಾರೆ. ಚೆಕ್‌ ಗಣರಾಜ್ಯದ 155 ಮಂದಿ ನೇಪಾಳದಲ್ಲಿ ವಾಸವಿದ್ದರು, 54 ಮಂದಿ ಮಾತ್ರವೇ ಸರ್ಕಾರದ ಜತೆ ಸಂಪರ್ಕದಲ್ಲಿದ್ದಾರೆ. ಫ್ರಾನ್ಸ್ ದೇಶದ 1098 ಮಂದಿ ನೇಪಾಳದಲ್ಲಿದ್ದಾರೆ, 674 ಮಂದಿ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಗ್ರೀಸ್ ದೇಶದ ಇಬ್ಬರು ಸುರಕ್ಷಿತರಾಗಿದ್ದಾರೆ. ಇಂಡೋನೇಷ್ಯಾ ದೇಶದ 36 ಜನರ ಪೈಕಿ 18 ಮಂದಿ ಸ್ಥಳೀಯ ನಿವಾಸಿಗಳು, 18 ಮಂದಿ ಸಂಪರ್ಕಕ್ಕೆ ಸಿಗುತ್ತಿಲ್ಲವಾದರೆ, ಐಲ್ಯಾಂಡ್‌ನ ನೂರು ಜನರು ಅಪಾಯದ ಸ್ಥಳದಲ್ಲಿದ್ದಾರೆ. ಹಲವರು ಸಂಪರ್ಕ ಮಾಡಲು ಸಿಗುತ್ತಿಲ್ಲ ಎಂದು ಸರ್ಕಾರ ಹೇಳಿದೆ.

ನೇಪಾಳದಲ್ಲಿ ಇಟಲಿಯ 300 ಜನರಿದ್ದು, ಅವರನ್ನು ಪತ್ತೆಹಚ್ಚಲಾಗಿದೆ. ಜಪಾನಿನ ವಿದೇಶಾಂಗ ಸಚಿವಾಲಯ ಪೈಕಿ ಒಬ್ಬ ಜಪಾನಿ ಪ್ರಜೆ ಸಾವನ್ನಪ್ಪಿದ್ದಾನೆ, ಮಹಿಳೆ ಗಾಯಗೊಂಡಿದ್ದಾಳೆ. ಮೆಕ್ಸಿಕೋದ ಒಬ್ಬ ಪ್ರಜೆ ನಾಪತ್ತೆಯಾಗಿದ್ದಾನೆ. 28 ಜನರು ಸುರಕ್ಷಿತರಾಗಿದ್ದಾರೆ. ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿದ್ದ ಮಲೇಷಿಯಾ ಪರ್ವತಾರೋಹಿಗಳು ಸೇರಿದಂತೆ ನೇಪಾಳದಲ್ಲಿದ್ದ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ.

SCROLL FOR NEXT