ದೇಶ

ಭೂಕಂಪ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸಿದ್ಧ-ಪಾರಿಕ್ಕರ್

Shilpa D

ನವದೆಹಲಿ: ಭೂಕಂಪ ಪೀಡಿತ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಭಾರತ ಸಿದ್ದವಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹೇಳಿದ್ದಾರೆ.

ಏಪ್ರಿಲ್ 25 ರಂದು ಸಂಭವಿಸಿದ ಭೀಕರ ಭೂಕಂಪದಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 10 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಭಾರತೀಯ ವಾಯು ಸೇನೆ ಅಧಿಕಾರಿಗಳನ್ನು ಭೇಟಿ ಮಾಡಿರುವ ನೇಪಾಳ ಸರ್ಕಾರ ಭಾರತದ ನೆರವು ಕೋರಿದೆ. ನೇಪಾಳ ಸರ್ಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆ ಸಂಪರ್ಕದಲ್ಲಿದೆ ಎಂದು ಹೇಳಿದರು.

ಭೂಕಂಪ ಪೀಡಿತ ಪ್ರದೇಶದಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಭಾರತೀಯ ವಾಯು ಪಡೆ, ತಾಂತ್ರಿಕ ಉಪಕರಣಗಳು, ವೈದ್ಯಕೀಯ ಸೌಲಭ್ಯ, ಆಹಾರ, ಔಷಧಿ ಸೇರಿದಂತೆ ಹಲವು ಅವಶ್ಯಕ ಸಾಮಾಗ್ರಿಗಳ ಜೊತೆ ಕಾರ್ಯಾಚರಣೆಯಲ್ಲಿ ತೊಡಗಿದವು ಎಂದರು.
 
ಹೀಗಾಗಲೇ ಭಾರತೀಯ ವಾಯು ಸೇನೆ ಭೂಕಂಪ ಪೀಡಿತ ಪ್ರದೇಶದಿಂದ 3 ಸಾವಿರ ಮಂದಿಯನ್ನು ಸುರಕ್ಷಿತವಾಗಿ ಕರೆತಂದಿದೆ. ಸೂಪರ್ ಹರ್ಕ್ಯುಲೆಸ್ ಮತ್ತು ಎಎನ್ 32 ವಿಮಾನಗಳು 314.6 ಟನ್ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ದಿವೆ ಎಂದು ವಿವರ ನೀಡಿದರು.

SCROLL FOR NEXT