ದೇಶ

ಹೃಷಿಕೇಶ, ಬದರಿನಾಥದಲ್ಲಿ ಭೂಕುಸಿತ: ಹೆದ್ದಾರಿ ಬಂದ್

Shilpa D

ಒಂದೆಡೆ ನೇಪಾಳದಲ್ಲಿ ತೀವ್ರ ಭೂಕಂಪದಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಪವಿತ್ರ ಯಾತ್ರಾ ಸ್ಥಳಗಳಾದ ಬದರಿನಾಥ ಮತ್ತು ಹೃಷಿಕೇಶದ ವಿಷ್ಣು ಪ್ರಯಾಗ ಬಳಿ ಭೂಕುಸಿತವಾಗಿದೆ.

ಭೂಕುಸಿತದಿಂದಾಗಿ ಹೃಷಿಕೇಶ-ಬದರಿನಾಥ್ ಹೆದ್ದಾರಿ ಬಂದ್ ಆಗಿದೆ. ಹಿಮಾಲಯ ತಪ್ಪಲಿನಲ್ಲಿರುವ ಚಾರ್ ಧಾಮ್ ಎಂದೇ ಪ್ರಸಿದ್ಧವಾಗಿರುವ ಕೇದಾರನಾಥ್, ಬದರಿನಾಥ್, ಗಂಗೋತ್ರಿ, ಯಮುನೋತ್ರಿಗಳ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಭೂಕುಸಿತದಿಂದ ಹೆದ್ದಾರಿ ಬಂದ್ ಆಗಿರುವುದರಿಂದ ಭಕ್ತಾದಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ವರ್ಷದಲ್ಲಿ ಆರು ತಿಂಗಳು ಮಾತ್ರ ದೇವಾಲಯಗಳ ಬಾಗಿಲು ತೆರೆಯುವುದರಿಂದ ದೇವರ ದರ್ಶನಕ್ಕಾಗಿ ಬರುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ. ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಏಪ್ರಿಲ್ 26 ರಂದು ಬದರಿನಾಥ್ ದೇವಾಲಯದ ದ್ವಾರ ತೆರೆದು ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದ್ರು. 2013 ರ ಜೂನ್ ನಲ್ಲಿ ಸಂಭವಿಸಿದ ಮೇಘಸ್ಪೋಟದಿಂದ ಕೇದಾರನಾಥ ಸಂಪೂರ್ಣ ಜರ್ಝರಿತವಾಗಿತ್ತು.

SCROLL FOR NEXT