ಮುಂಬೈ: ಮ್ಯಾಗಿ ನೂಡಲ್ಸ್‍ನಲ್ಲಿ ಮಿತಿಗಿಂತ ಹೆಚ್ಚು ಸೀಸದ ಅಂಶವಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‍ಎಸ್‍ಎಐ)ದ ವರದಿ ಪ್ರಶ್ನಿಸಿ ನೆಸ್ಲೆ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಯನ್ನು ಬಾಂಬೆ ಹೈಕೋರ್ಟ್ ಪೂರ್ಣಗೊಳಿಸಿದೆ.
ಈ ಕುರಿತು ತೀರ್ಪನ್ನು ನಂತರ ಪ್ರಕಟಿಸಲಿದೆ ಎಂದು ಕಂಪನಿ ಪರ ವಕೀಲ ರಾಜೇಶ್ ಭಾತ್ರಾ ಹೇಳಿದ್ದಾರೆ. ಮ್ಯಾಗಿಯಲ್ಲಿ ಹೆಚ್ಚಿನ ಸೀಸದ ಅಂಶವಿದೆ ಎಂದು ಎಫ್ಎಸ್‍ಎಸ್‍ಎಐನ ಉತ್ತರ ಪ್ರದೇಶ ವಿಭಾಗ ವರದಿ ನೀಡಿತ್ತು.
ಇದರಿಂದ ಕಂಪನಿ ಭಾರತದಲ್ಲಿನ ಉತ್ಪನ್ನವನ್ನು ನಾಶಗೊಳಿಸಿತ್ತು. ಇದೇ ಸಂದರ್ಭದಲ್ಲಿ ಪ್ರಾಧಿಕಾರದ ವರದಿಯನ್ನು ಬಾಂಬೆ ಹೈಕೋರ್ಟ್‍ನಲ್ಲಿ ಪ್ರಶ್ನಿಸಿತ್ತು.