ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ಹಿಂದೂಗಳು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ಮತ್ತು ಅವರ ಅಭಿವೃದ್ಧಿಯ ಮೇಲ್ವಿಚಾರಣೆಯನ್ನು ಹತ್ತಿರದಿಂದ ಗಮನಿಸುತ್ತಿದ್ದು, ಸೂಕ್ತ ಸಭೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಭಾರತೀಯ ಹಿಂದೂ ಜನರು ಪಾಕಿಸ್ತಾನದಲ್ಲಿ ಮದುವೆ ದಾಖಲಾತಿಯಂತಹ ವಿಷಯಗಳಿಗೆ ಕಷ್ಟಪಡುತ್ತಿರುವುದಕ್ಕೆ ಸರ್ಕಾರ ಸಹಾಯ ಮಾಡಲಿದೆ ಎಂದು ನಿನ್ನೆ ರಾಜ್ಯಸಭೆಯಲ್ಲಿ ಹೇಳಿದರು. ಪಂಜಾಬ್ ನ ಬಿಜೆಪಿಯ ರಾಜ್ಯಸಭಾ ಸದಸ್ಯ ಅವಿನಾಶ್ ರೈ ಖನ್ನಾ ಅವರು ಪತ್ರದ ಮೂಲಕ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಅಲ್ಲಿರುವ ಭಾರತೀಯ ಅಲ್ಪಸಂಖ್ಯಾತರು ಸರ್ಕಾರಿ ಕೆಲಸದ ಮಟ್ಟದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿಂದೆಯೂ ಪಾಕಿಸ್ತಾನದ ಜೊತೆ ಚರ್ಚಿಸಿದ್ದೆವು. ಪಾಕಿಸ್ತಾನ ಸರ್ಕಾರಕ್ಕೂ ಈ ಬಗ್ಗೆ ಅರಿವಿದೆ ಎಂದು ಹೇಳಿದರು.
ಅವಿನಾಶ್ ಅವರು ವಿದೇಶಾಂಗ ಸಚಿವೆಗೆ ಪತ್ರದಲ್ಲಿ, ಪಾಕಿಸ್ತಾನ ಸರ್ಕಾರಿ ಅಧಿಕಾರಿಗಳು ಮದುವೆ ಪ್ರಮಾಣಪತ್ರವನ್ನು ನೀಡದಿರುವ ಕಾರಣ ಅಲ್ಲಿರುವ ಅನೇಕ ಹಿಂದೂಗಳಿಗೆ ತೊಂದರೆಯಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.