ಸಾಂದರ್ಭಿಕ ಚಿತ್ರ 
ದೇಶ

ಅರುಣಾಚಲಪ್ರದೇಶದಲ್ಲಿ ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಪತ್ತೆ

ಐಎಎಸ್ ಅಧಿಕಾರಿ ಸಹಿತ ಇಂದು ಬೆಳಗ್ಗೆಯಿಂದ ನಾಪತ್ತೆ ಅರುಣಾಚಲ ಪ್ರದೇಶದ ಪವನ್ ಹನ್ಸ್ ಹೆಲಿಕಾಪ್ಟರ್ ಪತ್ತೆಯಾಗಿದೆ....

ಅರುಣಾಚಲ ಪ್ರದೇಶ: ಐಎಎಸ್ ಅಧಿಕಾರಿ ಸಹಿತ ಇಂದು ಬೆಳಗ್ಗೆಯಿಂದ ನಾಪತ್ತೆ ಅರುಣಾಚಲ ಪ್ರದೇಶದ ಪವನ್ ಹನ್ಸ್ ಹೆಲಿಕಾಪ್ಟರ್ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯವನ್ನು ಈಗ ಚುರುಕು ಗೊಳಿಸಲಾಗಿದೆ.

ಅರುಣಾಚಲ ಪ್ರದೇಶದ ತಿರಾಪ್‌ ಜಿಲ್ಲಾಧಿಕಾರಿಯಾಗಿರುವ ಐಎಎಸ್‌ ಅಧಿಕಾರಿ ಕಮಲೇಶ್‌ ಜೋಷಿ ಮತ್ತು ಓರ್ವ ಪೈಲಟ್‌ ಹಾಗೂ ಓರ್ವ ನ್ಯಾವಿಗೇಟರ್‌ ಹೆಲಿಕಾಪ್ಟರ್‌ನಲ್ಲಿ ಇದ್ದರು. ಗುವಾಹಟಿಯಿಂದ ದೊರಕಿರುವ ವರದಿಗಳ ಪ್ರಕಾರ ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರಲ್ಲಿ ಓರ್ವ ಹಿರಿಯ ಪೊಲೀಸ್‌ ಅಧಿಕಾರಿಯೂ ಇದ್ದರು ಎನ್ನಲಾಗಿದೆ.

ಎರಡು ಇಂಜಿನ್‌ಗಳ ದೌಫೀನ್‌ ಎನ್‌3 ಸಂಖ್ಯೆಯ ಈ ಪವನ್‌ ಹಂಸ್‌ ಹೆಲಿಕಾಪ್ಟರ್‌ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ತಿರಾಪ್‌ ಜಿಲ್ಲೆಯ ದೇವಮಾಲಿ ಎಂಬಲ್ಲಿ ಹಾರುತ್ತಿದ್ದ ವೇಳೆ ನಿಯಂತ್ರಣ ಕೇಂದ್ರದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು. ಮೂಲಗಳ ಪ್ರಕಾರ ತಿರಾಪ್‌ ಜಿಲ್ಲಾಧಿಕಾರಿ ಕಮಲೇಶ್‌ ಅವರು ಅಸ್ಸಾಂನ ದೀಬ್ರೂಗಢದಿಂದ ಖೋನ್ಸಾಗೆ ತೆರಳುತ್ತಿದ್ದರು. ಆ ವೇಳೆ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ನಾಪತ್ತೆಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT