ಪ್ರೇಮಿಗಳ ನಗ್ನಗೊಳಿಸಿ ಗ್ರಾಮದಲ್ಲಿ ಪರೇಡ್ ಮಾಡಿಸಿದ ಗ್ರಾಮಸ್ಥರು (ಸಾಂದರ್ಭಿಕ ಚಿತ್ರ) 
ದೇಶ

ಪ್ರೇಮಿಗಳ ತಲೆಬೋಳಿಸಿ, ನಗ್ನಗೊಳಿಸಿ ಪರೇಡ್ ಮಾಡಿಸಿದ ಗ್ರಾಮಸ್ಥರು

ಪ್ರೇಮಿಗಳೆಂದರೆ ಕ್ರೂರವಾಗಿ ನಡೆದುಕೊಳ್ಳುವುದು ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿ ಹೊಗಿದೆ. ಇದಕ್ಕೆ ಉದಾಹರಣೆಯಾಗಿ ವಾರಣಾಸಿ ಘಟನೆಯೊಂದು ನಡೆದಿದ್ದು, ಇಲ್ಲಿನ ಗ್ರಾಮಸ್ಥರು ಪ್ರೇಮಿಗಳಿಬ್ಬರಿಗೆ ತಲೆಬೋಳಿಸಿದ್ದಲ್ಲದೇ ಅವರಿಬ್ಬರನ್ನೂ...

ಲಖನೌ: ಪ್ರೇಮಿಗಳೆಂದರೆ ಕ್ರೂರವಾಗಿ ನಡೆದುಕೊಳ್ಳುವುದು ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿ ಹೊಗಿದೆ. ಇದಕ್ಕೆ ಉದಾಹರಣೆಯಾಗಿ ವಾರಣಾಸಿ ಘಟನೆಯೊಂದು ನಡೆದಿದ್ದು, ಇಲ್ಲಿನ ಗ್ರಾಮಸ್ಥರು ಪ್ರೇಮಿಗಳಿಬ್ಬರಿಗೆ ತಲೆಬೋಳಿಸಿದ್ದಲ್ಲದೇ ಅವರಿಬ್ಬರನ್ನೂ ನಗ್ನಗೊಳಿಸಿ ಗ್ರಾಮದ ಸುತ್ತ ಪರೇಡ್ ಮಾಡಿರುವ ಘಟನೆ ಬಾರ್ಗವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಪ್ರೇಮಿಗಳಿಬ್ಬರು ಹಲವು ವರ್ಷಗಳಿಂದ ಪ್ರೀತಿಸಿದ್ದರು. ಆದರೆ, ಇವರಿಬ್ಬರ ಮದುವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಊರು ಬಿಟ್ಟು ಹೋಗಿ ಮದುವೆಯಾದ ಪ್ರೇಮಿಗಳಿಬ್ಬರೂ ನಾಲ್ಕು ದಿನಗಳ ಹಿಂದಷ್ಟೇ ಊರಿಗೆ ಮರಳಿಬಂದಿದ್ದರು. ಈ ಇಬ್ಬರನ್ನು ಕಂಡ ಗ್ರಾಮಸ್ಥರು ಕೆಂಡಾಮಂಡಲವಾಗಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರಿಗೂ ಬಲವಂತದಿಂದ ತಲೆಬೋಳಿಸಿ, ನಗ್ನಗೊಳಿಸಿ ನಂತರ ಊರಿನ ಸುತ್ತ ಪರೇಡ್ ಮಾಡಿಸಿದ್ದಾರೆ.

ತಮ್ಮ ಮಗ ನಗ್ನವಾಗಿ ಊರಿನ ಸುತ್ತ ಓಡಾಡುತ್ತಿರುವುದನ್ನು ಕಂಡ ಯುವಕನ ತಂದೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಆದರೆ, ರಕ್ಷಣೆ ಮಾಡಲು ಮುಂದಾಗದ ಪೋಲೀಸರು ಆತನನ್ನು ಲೇವಡಿ ಮಾಡಲು ಪ್ರಾರಂಭಿಸಿದ್ದು, ತಮ್ಮ ನಾಯಕ ಮೋದಿಯವರ ಬಳಿ ಹೋಗಿ ದೂರು ನೀಡುವಂತೆ ಹೇಳಿದ್ದಾರೆ.

ಗ್ರಾಮಸ್ಥರ ಹಲ್ಲೆಗೊಳಗಾದ ಯುವಕ ಘಟನೆ ಕುರಿತಂತೆ ಮಾತನಾಡಿದ್ದು, ಗ್ರಾಮಸ್ಥರು ನಮ್ಮಿಬ್ಬರ ತಲೆ ಬೋಳಿಸಿದರಲ್ಲದೇ ನಗ್ನಗೊಳಿಸಿ ಬಲವಂತವಾಗಿ ಗ್ರಾಮದ ಸುತ್ತ ಓಡಾಡಿಸಿದರು.  ವಿವಾಹಕ್ಕೆ ಮೊದಲು ನಮ್ಮ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎರಡು ದಿನಗಳ ಹಿಂದಷ್ಟೇ ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ