ಸಾಂದರ್ಭಿಕ ಚಿತ್ರ 
ದೇಶ

ಮನೆಗೆಲಸದವರಿಗೆ ಉದ್ಯೋಗ ಭದ್ರತೆ

ಮನೆಗೆಲಸ, ತೋಟದ ಮಾಲಿ, ಚಾಲಕರನ್ನು ಬೇಕೆಂದಾಗ ಕರೆದು ಕೆಲಸ ಮಾಡಿಸಿಕೊಳ್ಳುವುದು ಇನ್ನು ಬಹಳ ದಿನ ನಡೆಯಲಾರದು! ಏಕೆಂದರೆ...

ನವದೆಹಲಿ: ಮನೆಗೆಲಸ, ತೋಟದ ಮಾಲಿ, ಚಾಲಕರನ್ನು ಬೇಕೆಂದಾಗ ಕರೆದು ಕೆಲಸ ಮಾಡಿಸಿಕೊಳ್ಳುವುದು ಇನ್ನು ಬಹಳ ದಿನ ನಡೆಯಲಾರದು! ಏಕೆಂದರೆ, ಇಂತಹ ಅಸಂಘಟಿತ ಕೆಲಸಗಾರರಿಗೆ ಉದ್ಯೋಗ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಅಸಂಘಟಿತ ಕಾರ್ಮಿಕ ನೀತಿ ಜಾರಿಗೆ ಮುಂದಾಗಿದ್ದು, ಪ್ಲೇಸ್‍ಮೆಂಟ್ ಏಜೆನ್ಸಿ ಮೂಲಕವೇ ಕೆಲಸಗಾರರನ್ನು ಸರಬರಾಜು ಮಾಡುವ ಪ್ರಸ್ತಾಪ ಸಿದ್ಧಪಡಿಸಿದೆ.
ದೇಶದ ಅಸಂಘಟಿತ ವಲಯದ ಸುಮಾರು 3 ಕೋಟಿ ಕಾರ್ಮಿಕರಿಗೆ ಪಿಎಫ್ , ಸಂಬಳ ಸಹಿತ ರಜೆ, ಇಎಸ್‍ಐ ಮುಂತಾದ ಸೌಲಭ್ಯ ಗಳ ಜೊತೆ ಸೇವಾ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಕೇಂದ್ರ ಸರ್ಕಾರ ಹಿಂದಿನ ಯುಪಿಎ ಸರ್ಕಾರದ 2007ರ ಪ್ರಸ್ತಾ ವನೆಯನ್ನೇ ಇಟ್ಟುಕೊಂಡು ಹೊಸ ರಾಷ್ಟ್ರೀಯ ನೀತಿ ರೂಪಿಸಲು ಸಿದಟಛಿತೆ ನಡೆಸಿದೆ. ಪ್ರಸ್ತಾವಿತ ನೀತಿ ಪ್ರಕಾರ ಮನೆಗೆಲಸ ದವರು, ಚಾಲಕರು, ಪ್ಲಂಬರ್, ಕೈತೋಟದ ಕೆಲಸಗಾರರು ಮುಂತಾದ ಅಸಂಘಟಿತ ವಲ ಯದ ಕಾರ್ಮಿಕರನ್ನು ಸರ್ಕಾರ ಗುರು ತಿಸಿದ ಪ್ಲೇಸ್‍ಮೆಂಟ್ ಏಜೆನ್ಸಿ ಮೂಲಕವೇ
ಪಡೆದುಕೊಳ್ಳಬೇಕಾಗುತ್ತದೆ. ಈ ನಿಯಮ ಉಲ್ಲಂಘಿಸಿ ನೇರವಾಗಿ ಇಂತಹ ಕಾರ್ಮಿಕರನ್ನು ಬಳಸಿಕೊಂಡರೆ ಅದನ್ನು ಜೀತ ಎಂದು ಪರಿಗಣಿಸಿ ಕಾನೂನು ಕ್ರಮಕ್ಕೆ
ಗುರಿಪಡಿಸಲಾಗುವುದು!

ಈ ಸಂಬಂಧ ಶೀಘ್ರವೇ ಸಂಪುಟ ಅನುಮೋದನೆ ಪಡೆಯಲು ಕಾರ್ಮಿಕ ಸಚಿವಾಲಯ ತಯಾರಿ ನಡೆಸಿದ್ದು, ಮುಂದಿನ ದಿನಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ವಾರದ ರಜೆ, 2 ತಿಂಗಳ ಹೆರಿಗೆ ರಜೆ, ವರ್ಷಕ್ಕೆ 30 ಸಂಬಳಸಹಿತ ರಜೆ ದೊರೆಯಲಿದೆ. ಈ ಸೌಲಭ್ಯ ಪಡೆ ಯಲು ಕಾರ್ಮಿಕರು ತಮ್ಮ ವ್ಯಾಪ್ತಿಯ ನಿಗದಿತ ಪ್ಲೇಸ್‍ಮೆಂಟ್ ಏಜೆನ್ಸಿಗಳಲ್ಲಿ ನೋಂದಾ ಯಿಸಿಕೊಂಡಿರ ಬೇಕಾಗುತ್ತದೆ. ಕಾರ್ಮಿಕ ಮತ್ತು ಮಾಲೀಕರ ನಡುವೆ
ಮಧ್ಯವರ್ತಿಯಾಗಿ ಪ್ಲೇಸ್‍ಮೆಂಟ್ ಏಜೆನ್ಸಿಕಾರ್ಯನಿರ್ವಹಿಸಲಿದ್ದು, ನೋಂದಾ ಯಿತ ಕಾರ್ಮಿಕರ ಕೆಲಸದ ಹಂಚಿಕೆ ಮತ್ತು ಸೌಲಭ್ಯ ಮೇಲ್ವಿಚಾರಣೆಗಾಗಿ ಕಾರ್ಮಿಕ ಸಂಘಟನೆಗಳ ಇಬ್ಬರು ಪ್ರತಿನಿಧಿಗಳು ಆಯಾ ಏಜೆನ್ಸಿಗೆ ಮೇಲ್ವಿಚಾರಕರಾಗಿ ನೇಮಕಗೊಳ್ಳು ತ್ತಾರೆ. ಹೊಸ ಪ್ರಸ್ತಾವನೆ ಮುಂದಿನ ಎರಡು ವಾರದಲ್ಲಿ ಸಂಪುಟದ ಮುಂದೆ ಬರಲಿದೆ ಎಂದು ವರದಿ ಮಾಡಿರುವ 'ದ ಎಕಾನಮಿಕ್ ಟೈಮ್ಸ್ ' ಪತ್ರಿಕೆ, ಕಾನೂನು
ಜಾರಿಗೆ ಬಂದರೆ ದೇಶದ 3 ಕೋಟಿಯಷ್ಟು ಅಸಂಘಟಿತ ಕಾರ್ಮಿಕರ ಬದುಕಿಗೆ ದೊಡ್ಡ ಭದ್ರತೆ ಸಿಗಲಿದೆ ಎಂದು ಹೇಳಿದೆ. ಕೆಲಸ ತೆಗೆದುಕೊಳ್ಳುವ ಮಾಲೀಕರು, ಕಾರ್ಮಿಕರಿಗೆ ಸಂಬಳವಲ್ಲದೆ ಪಿಎಫ್ ,ಇಎಸ್‍ಐ ಸಂಬಂಧ ತಮ್ಮ ಪಾಲಿನಹಣವನ್ನು ಕೂಡ ನೀಡಬೇಕಾಗುತ್ತದೆ. ಇಂತಹ ಕಾರ್ಮಿಕರನ್ನು ಹೆಚ್ಚು ದುಡಿಸಿಕೊಳ್ಳುವ ಸರ್ಕಾರಿ ನೌಕರರು, ಅವರಿಗೆ ಮಧ್ಯಾಹ್ನದ ಊಟವನ್ನೂ ನೀಡಬೇಕು ಎಂದು ಪ್ರಸ್ತಾವಿತ ನಿಯಮಹೇಳುತ್ತದೆ. ಈ ಪ್ರಸ್ತಾವನೆಯನ್ನು ಸ್ವಾಗತಿಸಿರುವ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಹಿತ ದೃಷ್ಟಿಯಿಂದ ಸರ್ಕಾರದ ನೀತಿ ಸ್ವಾಗತಾರ್ಹ. ಆದರೆ, ಕೇವಲ ನೀತಿಯಷ್ಟೇ ಸಾಲದು, ಅದು ವಾಸ್ತವದಲ್ಲಿ
ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿ ಕೊಳ್ಳುವ ವ್ಯವಸ್ಥೆ ಕೂಡ ಬೇಕಾಗುತ್ತದೆ ಎಂದು ಹೇಳಿವೆ. ಅಂತೂ ಸಿಕ್ಕರೆ ಕೆಲಸ, ಇಲ್ಲವೇ ಬರಿಗೈ ಅಲೆದಾಟ ಎಂಬಂತಿದ್ದ ಅಸಂಘಟಿತ ಕಾರ್ಮಿಕರ ಬದುಕನ್ನು ಹಳಿಗೆ ತರುವ ಪ್ರಯತ್ನ ಸರ್ಕಾರದ ಕಡೆಯಿಂದ ನಡೆಯುತ್ತಿದೆ. ಜನರ ಸ್ಪಂದನೆ ಮತ್ತು ಕಾನೂನು ಪಾಲನೆ ಮೇಲೆ ಅದರ ಯಶಸ್ಸು ನಿಂತಿದೆ.

ಕೇವಲ ಅಸಂಘಟಿತ ಕಾರ್ಮಿಕ ನೀತಿಯಷ್ಟೇ ಸಾಲದು. ನೀತಿ ಜಾರಿಗೆಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳೂ ಬೇಕು. ಆಗ ಮಾತ್ರ ಅಸಂಘಟಿತ ಕಾರ್ಮಿಕರ ಬದುಕಿಗೆ ಭದ್ರತೆ ಸಾಧ್ಯ.
- ಎ.ಕೆ. ಪದ್ಮನಾಭನ್, ಸಿಐಟಿಯು ಅಧ್ಯಕ್ಷ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT