ದೇಶ

ಮಸಾಜ್ ಮಾಡುವುದಕ್ಕೆ ನಿರಾಕರಿಸಿದ ವಿದ್ಯಾರ್ಥಿಯ ಕಾಲು ಮುರಿದ ಶಿಕ್ಷಕ

ನವದೆಹಲಿ: ಕಾಲಿಗೆ ಮಸಾಜ್ ಮಾಡುವಂತೆ ಹೇಳಿದ ಶಿಕ್ಷಕನ ಮಾತನ್ನು ನಿರಾಕರಿಸಿದ 3ನೇ ತರಗತಿಯ ಬಾಲಕನೊಬ್ಬನಿಗೆ ಮನಬಂದಂತೆ ಥಳಿಸಿ ಮಹಡಿಯಿಂದ ಕೆಳಗೆ ಹಾಕಿರುವ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆದಿದೆ.

ಶಾಲೆ ಪ್ರಾರಂಭವಾಗುತ್ತಿದ್ದಂತೆ ತರಗತಿಗೆ ಬರುತ್ತಿದ್ದ ಶಿಕ್ಷಕ ವಿದ್ಯಾರ್ಥಿಗಳಲ್ಲಿ ತನ್ನ ಕಾಲಿಗೆ ಮಸಾಜ್ ಮಾಡುವಂತೆ ಕೋರುತ್ತಿದ್ದನು. ಯಾರಾದರು ಬಂದರೆ ಎಂಬ ಕಾರಣಕ್ಕೆ  ಇಬ್ಬರು ವಿದ್ಯಾರ್ಥಿಗಳನ್ನು ಶಾಲಾ ಕೊಠಡಿಯ ಬಾಗಿಲ ಬಳಿ ನಿಲ್ಲಿಸುತ್ತಿದ್ದರು. ಒಬ್ಬ ವಿದ್ಯಾರ್ಥಿ ಆತನ ಕಾಲಿಗೆ ಮಸಾಜ್ ಮಾಡಬೇಕಿತ್ತು. ಹೀಗಾಗಿ ಈತನ ವರ್ತನೆ ಕಂಡ ಬಾಲಕ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದ. ಹೀಗಾಗಿ ಇದರಿಂದ ಕೋಪಗೊಂಡ ಶಿಕ್ಷಕ ಆತನಿಗೆ ಥಳಿಸಿದ್ದಾನೆಂದು ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹೇಳಿದ್ದಾರೆ.

ಪ್ರತಿ ದಿನದಂತೆ ಇಂದು ಶಾಲೆಗೆ ಬಂದ ಶಿಕ್ಷಕ ಕಾಲಿಗೆ ಮಸಾಜ್ ಮಾಡುವಂತೆ ತಿಳಿಸಿದರು. ಇದಕ್ಕೆ ನಾನು ನಿರಾಕರಿಸಿದ ಕಾರಣಕ್ಕೆ ಕೋಪಗೊಂಡು ಹಿಗ್ಗಾಮುಗ್ಗ ಹೊಡೆದರು. ನಂತರ ನನ್ನನ್ನು ಮೇಲ್ಮಹಡಿಯಿಂದ ಕೆಳಗೆ ಹಾಕಿದರು. ಸ್ವಲ್ಪ ಹೊತ್ತಾದ ಬಳಿಕ ನನ್ನ ತಂದೆ ಬಂದು ಮನೆಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು ಎಂದು ಗಾಯಗೊಂಡ ವಿದ್ಯಾರ್ಥಿ ಹೇಳಿದ್ದಾನೆ.

ಇಷ್ಟೆಲ್ಲ ಆದರೂ ಶಾಲೆಯ ಕಡೆಯಿಂದ ಯಾರೊಬ್ಬರು ನಮ್ಮ ಸಹಾಯಕ್ಕೆ ಬರಲಿಲ್ಲ. ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಹೊಡೆದು ಹೊರ ಹಾಕಿದ್ದರು ಯಾರೂಬ್ಬರೂ ಈ ಬಗ್ಗೆ ಮಾತನಾಡಲೇ ಇಲ್ಲ. ಶಿಕ್ಷಕನ ವರ್ತನೆ ಬಗ್ಗೆ ಪ್ರಾಂಶುಪಾಲರ ಬಳಿ ಮಾತನಾಡಲು ಹೋದಾಗ ಅವರು ನಾಳೆ ಬನ್ನಿ ಎಂದರು, ಅವರು ಹೇಳಿದ ದಿನಕ್ಕೆ ಹೋದರೆ ಮತ್ತೆ ಒಂದು ವಾರದ ಬಳಿಕ ಬನ್ನಿ ಎಂದರು ಎಂದು ವಿರ್ದಾರ್ಥಿಯ ತಾಯಿ ಹೇಳಿದ್ದಾರೆ.

ಶಾಲಾ ವರ್ತನೆಯಿಂದಾಗಿ ಬೇಸತ್ತಿರುವ ವಿದ್ಯಾರ್ಥಿಯ ಪೋಷಕರು ಇದೀಗ  ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

SCROLL FOR NEXT