ಸಾಂದರ್ಭಿಕ ಚಿತ್ರ 
ದೇಶ

ವಾಮಚಾರ ಶಂಕೆ: ಐವರು ಮಹಿಳೆಯರನ್ನು ಕೊಂದ ಗ್ರಾಮಸ್ಥರು

ವಾಮಚಾರ ಮಾಡುತ್ತಾರೆ ಎಂದು ಅನುಮಾನಗೊಂಡ ಗ್ರಾಮಸ್ಥರು ಐವರು ಮಹಿಳೆಯರನ್ನು ಹತ್ಯೆ ಮಾಡಿರುವ

ರಾಂಚಿ: ವಾಮಚಾರ ಮಾಡುತ್ತಾರೆ ಎಂದು ಅನುಮಾನಗೊಂಡ ಗ್ರಾಮಸ್ಥರು ಐವರು ಮಹಿಳೆಯರನ್ನು ಹತ್ಯೆ ಮಾಡಿರುವ ಘಟನೆ ಶನಿವಾರ ವರದಿಯಾಗಿದೆ.

ರಾಂಚಿ ಜಿಲ್ಲೆಯ ಕಂಜಿಯಾ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಐವರು ಮಹಿಳೆಯರು ವಾಮಚಾರದಲ್ಲಿ ತೊಡಗಿದ್ದಾರೆ ಎಂಬ ಶಂಕೆಯಿಂದ ಗ್ರಾಮಸ್ಥರು ಮಧ್ಯರಾತ್ರಿಯಲ್ಲಿ ಕೋಲು ಮತ್ತು ಹರಿತ ವಸ್ತುಗಳಿಂದ ಒಡೆದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಜ್ ಕುಮಾರ್ ಲಕ್ರಾ ತಿಳಿಸಿದ್ದಾರೆ.

2013ರಲ್ಲಿ 160 ಕೊಲೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 54 ಪ್ರಕರಣಗಳು ವಾಮಚಾರದಲ್ಲಿ ತೊಡಗಿದ್ದ ಮಹಿಳೆಯರ ಕೊಲೆ ಪ್ರಕರಣಗಳಾಗಿವೆ. ಜಾರ್ಖಾಂಡ್ ನಲ್ಲಿ 2001ರಿಂದ ಈವರೆಗೆ ವಾಮಚಾರದಲ್ಲಿ ತೊಡಗಿದಂತಹ 400 ಮಹಿಳೆಯರನ್ನು ಹತ್ಯೆ ಮಾಡಲಾಗಿದೆ.

ದೇಶದಲ್ಲಿ 2000ರಿಂದ 2012ರವರೆಗೆ ಸುಮಾರು 2,097 ಮಹಿಳೆಯರನ್ನು ಕೊಲೆ ಮಾಡಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಳದ ದಾಖಲೆಗಳು ಹೇಳುತ್ತಿವೆ.
ಘಟನೆ ಬಗ್ಗೆ ಜಾರ್ಖಾಂಡ್ ಮುಖ್ಯಮಂತ್ರಿ ರಘುಬಾರ್ ದಾಸ್ ಖಂಡನೆ ವ್ಯಕ್ತಪಡಿಸಿದ್ದು, ಅನಾಗರಿಕತೆಯಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿದೆ ಎಂದು ವಿಷಾಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT