ಭಾರತೀಯ ಸೇನೆ 
ದೇಶ

ಫೇಸ್ ಬುಕ್ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆಗೆ ಅಗ್ರಸ್ಥಾನ

ಸಾಮಾಜಿಕ ಜಾಲತಾಣ ಫೆಸ್ ಬುಕ್ ನ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಪಡೆದಿದೆ.

ನವದೆಹಲಿ: ಸಾಮಾಜಿಕ ಜಾಲತಾಣ ಫೆಸ್ ಬುಕ್ ನ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಪಡೆದಿದೆ. ಭಾರತೀಯ ಸೇನೆಯ ಜನಪ್ರಿಯತೆ ಸಿಐಎ, ಎಫ್.ಬಿ.ಐ, ನಾಸಾ ಸಂಸ್ಥೆಗಳ ಜನಪ್ರಿಯತೆಯನ್ನೂ ಹಿಂದಿಕ್ಕಿದೆ.

ಸತತ ಎರಡನೇ ಬಾರಿ ಭಾರತೀಯ ಸೇನೆ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು ಅತಿ ಹೆಚ್ಚು ಜನರು ಭಾರತೀಯ ಸೇನೆ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೂ ಭಾರತಿಯ ಸೇನೆ ಫೇಸ್ ಬುಕ್ ಪೇಜ್ ಅತಿ ಹೆಚ್ಚು ಪಿಟಿಎಟಿಯನ್ನು(ಪೀಪಲ್ ಟಾಕಿಂಗ್ ಅಬೌಟ್ ದಟ್) ರ್ಯಾಂಕಿಂಗ್ ಹೊಂದಿತ್ತು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಭಾರತೀಯ ಸೇನೆಯ, ಸೇನೆ ಪೇಜ್ ಗೆ ನಿಜವಾದ ಲೈಕ್ ಗಳು ಬರುತ್ತಿವೆ ಎಂದು ಹೇಳಿದೆ. ಪೇಜ್ ಬಗ್ಗೆ ಮಾತನಾಡುವ ಜನರ ಸಂಖ್ಯೆಯನ್ನು ಆಧರಿಸಿ ಪಿಟಿಎಟಿ ರ್ಯಾಂಕಿಂಗ್ ನ್ನು ನಿರ್ಧರಿಸಲಾಗುತ್ತದೆ. ಭಾರತೀಯ ಸೇನೆಯ ಫೇಸ್ ಬುಕ್ ಪೇಜ್ ಗೆ ಮಾತ್ರವಲ್ಲದೆ ವೆಬ್ ಸೈಟ್ ಗೂ ಉತ್ತಮ ಜನಪ್ರಿಯತೆ ವ್ಯಕ್ತವಾಗುತ್ತಿದ್ದು. ಪ್ರತಿ ವಾರ 25 ಲಕ್ಷ ಹಿಟ್ಸ್ ಬರುತ್ತಿವೆ.
 
2013 ರ ಜೂ.1 ರಂದು ಪ್ರಾರಂಭವಾದ ಸೇನೆಯ ಫೇಸ್ ಬುಕ್ ಪೇಜ್, ಈ ವರೆಗೂ 2 .9 ಮಿಲಿಯನ್ ಲೈಕ್ ಪಡೆದಿದೆ. ಜಿಯೋಲೊಕೇಶನ್ ಮೂಲಕ ಅಕೌಂಟ್  ಗಳನ್ನು ಪರಸ್ಪರ ಬ್ಲಾಕ್ ಮಾಡುವ ಮೂಲಕ ಫೇಸ್ ಬುಕ್ ಪೇಜ್ ನಲ್ಲೂ ಭಾರತೀಯ ಸೇನೆ, ಪಾಕಿಸ್ತಾನ ಸೇನೆ ಸಮರ ನಡೆಸುತ್ತಿದ್ದದ್ದು ವಿಶೇಷವಾಗಿತ್ತು.   

ಜಿಯೋಲೋಕೇಶನ್ ಮೂಲಕ ಅಕೌಂಟ್ ಬ್ಲಾಕ್ ಮಾಡುವುದರಿಂದ ಪಾಕಿಸ್ತಾನದಲ್ಲಿರುವ ವ್ಯಕ್ತಿ ಭಾರತೀಯ ಸೇನೆಯ ಫೇಸ್ ಬುಕ್ ಪೇಜ್ ನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ, ಅಂತೆಯೇ ಭಾರತಲ್ಲಿರುವ ವ್ಯಕ್ತಿಗೆ ಪಾಕಿಸ್ತಾನದ ಸೇನೆಯ ಫೇಸ್ ಬುಕ್ ಪೇಜ್ ನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!