ದೇಶ

ಶಿಸ್ತಿಗೆ ಧಕ್ಕೆಯುಂಟಾಗುವ ಟ್ಯಾಟು ಹಾಕಿಸಿಕೊಳ್ಳದಂತೆ ಸೇನಾಧಿಕಾರಿಗಳಿಗೆ ನಿರ್ಬಂಧ?

Srinivas Rao BV

ನವದೆಹಲಿ: ಭಾರತೀಯ ಸೇನೆ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಟ್ಯಾಟೂಗಳನ್ನು ನಿಷೇಧಿಸಲು ಸೇನೆ ಚಿಂತನೆ ನಡೆಸಿದೆ. ಈ ನಿರ್ಧಾರ ಕಾರ್ಯಗತವಾದರೆ ಸೇನೆಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಟ್ಯಾಟುಗಳನ್ನು ಹಾಕಿಸಿಕೊಳ್ಳುವಂತಿಲ್ಲ.

ಖಾಸಗಿ ಮಾಧ್ಯಮದ ವರದಿ ಪ್ರಕಾರ, ಸೇನೆಗೆ ಸೇರಲಿರುವ ಅಭ್ಯರ್ಥಿಗೆ ತನ್ನ ದೇಹದ ಮೇಲಿರುವ ಟ್ಯಾಟು ಗಳ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡಬೇಕಾಗುತ್ತದೆ. ಸೇನೆ ವಿಧಿಸಿರುವ ಮಾನದಂಡಗಳ ಪರಿಧಿಯಲ್ಲಿ ಆ ಟ್ಯಾಟುಗಳನ್ನು ಹಾಕಿಸಿಕೊಂಡಿದ್ದರೆ ಆತನನ್ನು ನೇಮಕ ಮಾಡಲಾಗುತ್ತದೆ. ಟ್ಯಾಟು ಹಾಕಿಸಿಕೊಳ್ಳುವುದಕ್ಕೂ ಸೇನೆ ಕೆಲವು ಮಾನದಂಡಗಳನ್ನು ವಿಧಿಸಿದ್ದು, ಸಂಪ್ರದಾಯ ಆಚರಣೆ ದೃಷ್ಠಿಯಿಂದ ಬುಡಕಟ್ಟು ಜನಾಂಗದವರಿಗೆ ಮಾತ್ರ  ಟ್ಯಾಟು(ಹಚ್ಚೆ) ಹಾಕಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ಸೇನೆಗೆ ಸೇರಲಿರುವ ವ್ಯಕ್ತಿ ತಾನು ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂದು ಸಾಬೀತು ಪಡಿಸಿದರೆ ಮಾತ್ರ ಇದಕ್ಕೆ ಅವಕಾಶವಿದೆ.

ಸೇನೆ ಸೇರಿದ ನಂತರ ಯಾವುದೇ ಟ್ಯಾಟುಗಳನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ತರಬೇತಿಗೆ ತೆರಳುವ ಮುನ್ನ ಅಭ್ಯರ್ಥಿಗಳು ಪ್ರಮಾಣಪತ್ರಕ್ಕೆ ಸಹಿ ಮಾಡುವ ನಿಯಮವನ್ನು ರೂಪಿಸಲೂ ಸೇನೆ ಚಿಂತನೆ ನಡೆಸಿದೆ. ಸೇನೆ ತನ್ನ  ಶಿಸ್ತಿಗೆ ಧಕ್ಕೆ ಉಂತಾಗದಂತಹ ಧಾರ್ಮಿಕ ಚಿಹ್ನೆ ಹಾಗೂ ಪ್ರೀತಿಪಾತ್ರರ ಹೆಸರುಗಳ ಟ್ಯಾಟುಗಳನ್ನು ಹಾಕಿಸಿಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಿದೆಯಂತೆ.

SCROLL FOR NEXT