ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನೆಸ್ಲೇ ಗೋದಾಮಿನ ಮೇಲೆ ದಾಳಿ: 20,000 ಕೆಜಿ ಮ್ಯಾಗಿ ವಶ

ಲಖನೌದಲ್ಲಿರುವ ನೆಸ್ಲೇ ಕಂಪನಿಯ ಮ್ಯಾಗಿ ಗೋದಾಮಿನ ಮೇಲೆ ದಾಳಿ ನಡೆಸಿದ ಉತ್ತರ ಪ್ರದೇಶದ ಆಹಾರ ಮತ್ತು ಔಷಧ ಆಡಳಿತ...

ಸಾಂದರ್ಭಿಕ ಚಿತ್ರ
Mainashree
Updated On : 11 Aug 2015, 1:26 am

ಲಖನೌ: ಲಖನೌದಲ್ಲಿರುವ ನೆಸ್ಲೇ ಕಂಪನಿಯ ಮ್ಯಾಗಿ ಗೋದಾಮಿನ ಮೇಲೆ ದಾಳಿ ನಡೆಸಿದ ಉತ್ತರ ಪ್ರದೇಶದ ಆಹಾರ ಮತ್ತು ಔಷಧ ಆಡಳಿತ ಮಂಡಳಿ, 2 ನಿಮಿಷದಲ್ಲಿ ತಯಾರಾಗುವ ಸುಮಾರು 20,000 ಕೆಜಿ ಮ್ಯಾಗಿಯನ್ನು ವಶಪಡಿಸಿಕೊಂಡಿದೆ.

ಈ ಮೊದಲು, ಲಖನೌ ಪ್ರಯೋಗಾಲಯ ಪರೀಕ್ಷೆಯಲ್ಲಿ 'ಮ್ಯಾಗಿ ನೂಡಲ್' ಮಾದರಿ ವಿಫಲಗೊಂಡಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇನ್ಸ್ ಪೆಕ್ಟರ್ ಹೇಳಿದ್ದರು.

'ಮ್ಯಾಗಿ' ಸ್ಯಾಂಪಲ್​ಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಇದ್ದುದು ಪತ್ತೆಯಾಗಿದೆ ಎಂದು ತಿಳಿಸಿದ್ದರು.

ಜೂನ್ ತಿಂಗಳಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರಲಾಗಿತ್ತು. ಮ್ಯಾಗಿ ಸೇರಿದಂತೆ ಇತರೆ ಯಾವುದೇ ನೂಡಲ್ಸ್ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಕ್ಲೀನ್ ಚಿಟ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮ್ಯಾಗಿ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ.

ಮ್ಯಾಗಿಯಲ್ಲಿ ಮಾನೋಸೋಡಿಯಂ ಗ್ಲುಟಾಮೇಟ್ (ಎಂಎಸ್​ಜಿ) ಮತ್ತು ಸತುವಿನ ಅಂಶ ಮಿತಿಗಿಂತ ಹೆಚ್ಚಿದೆ ಎಂಬ ಪ್ರಾಥಮಿಕ ವರದಿಗಳ ಬಳಿಕ ರಾಜ್ಯಾದ್ಯಂತ 500 ಮಾದರಿಗಳನ್ನು ಸಂಗ್ರಹಿಸಲಾಯಿತು. ಇವುಗಳಲ್ಲಿ ಐದು ಮಾದರಿಗಳು ಸಂಪೂರ್ಣ ‘ಅಯೋಗ್ಯ’ ಎಂದು ಕಂಡು ಬಂದಿದೆ ಎಂದು ಎಫ್​ಎಸ್​ಎಸ್​ಎಐ ಹೇಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments