ಕ್ಯಾಪ್ಟರ್‍ನ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಪಡೆ (ಕೃಪೆ : ಪಿಟಿಐ) 
ದೇಶ

ಪವನ್ ಹಂಸ ಕಾಪ್ಟರ್ ಅವಶೇಷ ಪತ್ತೆ: ಮೈಸೂರಿನ ರಾಜೀವ್ ಸಾವು

ಆರು ದಿನಗಳ ಹಿಂದೆ ನಾಪತ್ತೆಯಯಾಗಿದ್ದ ಪವನ್ ಹಂಸ ಹೆಲಿಕಾಪ್ಟರ್‍ನಲ್ಲಿದ್ದ ಮೈಸೂರಿನ ಪೈಲಟ್ ರಾಜೀವ್ ಬದುಕಿಬರಬಹುದು ಎಂಬ ನಿರೀಕ್ಷೆ ...

ಇಟಾನಗರ/ಮೈಸೂರು: ಆರು ದಿನಗಳ ಹಿಂದೆ ನಾಪತ್ತೆಯಯಾಗಿದ್ದ ಪವನ್ ಹಂಸ ಹೆಲಿಕಾಪ್ಟರ್‍ನಲ್ಲಿದ್ದ ಮೈಸೂರಿನ ಪೈಲಟ್ ರಾಜೀವ್ ಬದುಕಿಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕ್ಯಾಪ್ಟರ್‍ನ ಅವಶೇಷಗಳು ಸೋಮವಾರ ತಿರಾಪ್ ಜಿಲ್ಲೆ ಯ ಥಿನ್ಸಾ ಮತ್ತು ಸಾಂಗ್ಲಿಯಾನ್ ಗ್ರಾಮದ ನಡುವೆ ಪತ್ತೆಯಾಗಿದ್ದು, ರಾಜೀವ್ ಮೃತದೇಹವೂ ಸಿಕ್ಕಿದೆ. ಮೈಸೂರಿನ ರಮಾನುಜ ರಸ್ತೆ ನಿವಾಸಿಯಾಗಿದ್ದ ರಾಜೀವ್ ಅವರು ಸಿವಿಲ್ ಎಂಜಿನಿಯರ್ ಮಂಜುನಾಥ್ ಮತ್ತು ವಾಣಿಶ್ರೀ ಅವರ ಪುತ್ರ.ಮಗ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೀವ್ ಪೋಷಕರು ಅರುಣಾಚಲ ಪ್ರದೇಶಕ್ಕೆ ಧಾವಿಸಿದ್ದಾರೆ. ರಾಜೀವ್‍ಗೆ ಇತ್ತೀಚೆಗಷ್ಟೇ ವಿವಾಹ ನಿಶ್ಚಯವಾಗಿತ್ತು. ಅ. 6ರಂದು ಮದುವೆಗೆ ಎಲ್ಲ ಸಿದ್ಧತೆಯಲ್ಲಿತೊಡಗಿ ದ್ದರು. ರಾಜೀವ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಒಮ್ಮೆ ಪೈಲೆಟ್ ಆಗಿದ್ದರು. ಸೋಮವಾರ ಕಾಪ್ಟರ್ ನಿಯಂತ್ರಣ ಕಳೆದುಕೊಂಡ ಸ್ಥಳದಲ್ಲಿ ವಾಯುಪಡೆ ರಕ್ಷಣಾ ತಂಡ ಹುಡುಕಾಟ ನಡೆಸಿದಾಗ ಕಾಪ್ಟರ್‍ನ ಅವಶೇಷ ಹಾಗೂ ಮೃತದೇಹಗಳು ಪತ್ತೆಯಾಗಿವೆ. ರಾಜೀವ್ ಜತೆಗೆ ತಿರಾಪ್ ಜಿಲ್ಲಾ ಧಿಕಾರಿ ಡಾ. ಕಮಲೇಶ್ ಕುಮಾರ್ ಜೋಶಿ ಹಾಗೂ ಮತ್ತೊಬ್ಬ ಪೈಲಟ್ ಮೃತದೇಹವೂ ಪತ್ತೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT