ಸಾಂದರ್ಭಿಕ ಚಿತ್ರ 
ದೇಶ

ಭಾರತದಲ್ಲಿ 7 ತಿಂಗಳಲ್ಲಿ 41 ಹುಲಿಗಳ ಸಾವು

ಹುಲಿ ಸಂರಕ್ಷಣೆಗಾಗಿ ಸರ್ಕಾರ ಏನೆಲ್ಲಾ ಪ್ರಯತ್ನ ಮಾಡುತ್ತಿದ್ದರೂ ಅವುಗಳ ಸಂತತಿ ಮಾತ್ರ ನಶಿಸುತ್ತಲೇ ಇದೆ....

ನವದೆಹಲಿ: ಹುಲಿ ಸಂರಕ್ಷಣೆಗಾಗಿ ಸರ್ಕಾರ ಏನೆಲ್ಲಾ ಪ್ರಯತ್ನ ಮಾಡುತ್ತಿದ್ದರೂ ಅವುಗಳ ಸಂತತಿ ಮಾತ್ರ ನಶಿಸುತ್ತಲೇ ಇದೆ. ಹುಲಿ ಸಂರಕ್ಷಣೆಗಾಗಿ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಿದ್ದರೂ ಕಳೆದ 7 ತಿಂಗಳಲ್ಲಿ ದೇಶಾದ್ಯಂತ ಒಟ್ಟು 41 ಹುಲಿಗಳು ಸಾವನ್ನಪ್ಪಿವೆ ಎಂದು ವರದಿಯೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದೆ.

2015 ಜನವರಿ ಯಿಂದ ಆಗಸ್ಟ್ ವರೆಗೆ ದೇಶಾದ್ಯಂತ ಒಟ್ಟು 41 ಹುಲಿಗಳು ದಾರುಣ ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ  ತಿಳಿಸಿದೆ. ವರದಿ ಪ್ರಕಾರ 41 ಹುಲಿಗಳು ಸ್ವಾಭಾವಿಕವಾಗಿ ಸಾವನ್ನಪ್ಪಿಲ್ಲ, ಹುಲಿ ಮತ್ತು ಮಾನವರ ನಡುವಿನ ಸಂಘರ್ಷದಲ್ಲಿ ಬಂದೂಕಿನ ಗುಂಡಿಗೆ ಹೆಚ್ಚಿನ ಹುಲಿಗಳು ಬಲಿಯಾಗಿವೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಸಾವನ್ನಪ್ಪಿವೆ, ಕಳೆದ ವರ್ಷ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಹಲವು ಹುಲಿಗಳು ಸಾವನಪ್ಪಿದ್ದರೇ ಇನ್ನು ಕೆಲವು ಹುಲಿಗಳು ವಿಷಪ್ರಾಸನದಿಂದ ಮೃತಪಟ್ಟಿದ್ದವು. ಸ್ಥಳೀಯರು ಹುಲಿಗಳ ದೇಹದ ಹಲವು ಅಂಗಾಂಗಳಿಗಾಗಿ ಹುಲಿಗಳಿಗೆ ವಿಷವುಣಿಸಿ ಕೊಲೆ ಮಾಡಿದ್ದರು ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT