ದೇಶ

ಹಳೆ ವಾಹನ ಮರಳಿಸಿದರೆ ಸರ್ಕಾರದಿಂದ 1.5 ಲಕ್ಷದವರೆಗೆ ಪ್ರೋತ್ಸಾಹ ಧನ: ಗಡ್ಕರಿ

Lingaraj Badiger

ನವದೆಹಲಿ: ಮಾಲಿನ್ಯ ನಿಯಂತ್ರಣಕ್ಕಾಗಿ 10 ವರ್ಷಕ್ಕಿಂತ ಹಳೆಯದಾದ ವಾಹನವನ್ನು ಮರಳಿಸುವವರಿಗೆ 1.5 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಹೇಳಿದ್ದಾರೆ.

'ಈ ಸಂಬಂಧ ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಮತ್ತು ಶೀಘ್ರದಲ್ಲೇ ಹಣಕಾಸು ಸಚಿವಾಲಯದ ಅನುಮತಿ ಪಡೆಯಲಾಗುವದು' ಎಂದು ಗಡ್ಕರಿ ತಿಳಿಸಿದ್ದಾರೆ.

'ಹಳೆ ವಾಹನಗಳನ್ನು ಮರಳಿಸುವವರಿಗೆ ಒಂದು ಯೋಜನೆ ರೂಪಿಸಲಾಗಿದ್ದು, ನಿಮ್ಮ ಹಳೆಯ ವಾಹನವನ್ನು ಮರಳಿಸಿದ್ದಕ್ಕೆ ಪ್ರಮಾಣ ಪತ್ರ ನೀಡಲಾಗುತ್ತದೆ. ನೀವು ಹೊಸ ವಾಹನ ಖರೀದಿಸುವ ವೇಳೆ ಈ ಪ್ರಮಾಣ ಪತ್ರವನ್ನು ನೀಡಿದರೆ 50 ಸಾವಿರ ರುಪಾಯಿಯವರೆಗೆ ರಿಯಾಯ್ತಿ ದೊರೆಯಲಿದೆ' ಎಂದು ಸಚಿವರು ಹೇಳಿದರು.

ಕಾರಿನಂತಹ ಸಣ್ಣ ವಾಹನಗಳಿಗೆ 30 ಸಾವಿರದವರೆಗೆ ಹಾಗೂ ಲಾರಿಗಳಂತಹ ದೊಡ್ಡ ವಾಹನಗಳಿಗೆ 1.5 ಲಕ್ಷದವರೆಗೆ ತೆರಿಗೆ ರಿಯಾಯ್ತಿ ದೊರೆಯಲಿದೆ ಎಂದು ಗಡ್ಕರಿ ತಿಳಿಸಿದರು.

SCROLL FOR NEXT