ಚೆನ್ನೈ: ವಾಟ್ಸ್ ಆಪ್ ನಲ್ಲಿ ಹೆಣ್ಣು ಮಗುವಿನ ಅಶ್ಲೀಲ ಚಿತ್ರಗಳನ್ನು ಹಾಕಿ ತನ್ನ ಸಹೋದ್ಯೋಗಿಗಳಿಗೆ ಕಳಿಸಿದ್ದ ಖಾಸಗಿ ಕಂಪನಿಯೊಂದರ ಉದ್ಯೋಗಿಯನ್ನು ಸೈಬರ್ ಕ್ರೈಂ ಬ್ರ್ಯಾಂಚ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹೆಣ್ಣು ಮಗುವಿನ ಅಶ್ಲೀಲ್ ಚಿತ್ರಗಳನ್ನು ತೆಗೆದು ವಾಟ್ಸ್ ಆಪ್ ಗೆ ಹರಿಬಿಟ್ಟಿದ್ದ ಬಂಧಿತ ನನ್ನು ಹರಿಯಲ್ಲೂರ್ ನ ವೆಟ್ರಿವೇಲ್ ಎಂದು ತಿಳಿದುಬಂದಿದೆ.
ವೆಟ್ರಿವೇಲ್‌ನ ಈ ಕೃತ್ಯವನ್ನು ಆತನ ವಾಟ್ಸ್‌ಅಪ್ ಸಮೂಹದ ಒಬ್ಬ ಮಹಿಳೆಯ ಸಹಿತ ಇಬ್ಬರು ಸದಸ್ಯರು ಸೈಬರ್ ಕ್ರೈಂ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಸಿಐಡಿಗಳು ಆರೋಪಿಯನ್ನು ಬಂಧಿಸಿ ಆತನು ಅಶ್ಲೀಲ ಚಿತ್ರಗಳನ್ನು ಸೆರೆಹಿಡಿಯಲು ಬಳಸಿದ ಕ್ಯಾಮರಾ ಹಾಗೂ ಅದರಲ್ಲಿದ್ದ ಹೆಣ್ಣು ಮಗುವಿನ ಅಶ್ಲೀಲ ಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ.