ಹೈದರಾಬಾದ್: ನಿಷೇಧಿತ ಹುಜಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಆರೋಪದ ಮೇಲೆ ಪಾಕಿಸ್ತಾನ ಪ್ರಜೆಯನ್ನು ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೌತ್ ಜೋನ್ ಟಾಸ್ಕ್ ಪೋರ್ಸ್ ಮತ್ತು ಸೆಂಟ್ರಲ್ ಕ್ರೈಂ ಸ್ಟೇಷನ್ ಜಂಟಿ ಕಾರ್ಯಾಚರಣೆ ನಡೆಸಿ ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ(ಹುಜಿ) ಉಗ್ರ ಸಂಘಟನೆಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಮೊಹಮ್ಮೆದ್ ನಾಜೀರ್ ಎಂಬುವನನ್ನು ಬಂಧಿಸಿದ್ದಾರೆ.
ಇದೇ ವೇಳೆ ಪೊಲೀಸರು ಕಾನೂನು ಬಾಹಿರವಾಗಿ ನಗರದಲ್ಲಿ ಉಳಿದುಕೊಂಡಿದ್ದ ಮಾಯಾನ್ಮಾರ್ ಮೂಲದ ಓರ್ವ ಹಾಗೂ ಇಬ್ಬರು ಬಾಂಗ್ಲಾದೇಶಿಯರನ್ನು ಪೊಲೀಸರು ಬಂಧಿಸಿದ್ದಾರೆ.