ತೆಹೆಲ್ಕಾ ಮ್ಯಾಗಜಿನ್‌ನ ಕವರ್ ಪುಟ 
ದೇಶ

ಭಾಳ್ ಠಾಕ್ರೆಯನ್ನು ಉಗ್ರನೆಂದು ಬಿಂಬಿಸಿದ ತೆಹೆಲ್ಕಾ ವಿರುದ್ಧ ದೂರು

ಶಿವಸೇನೆಯ ಮುಖ್ಯಸ್ಥ ದಿವಂಗತ ಭಾಳ್ ಠಾಕ್ರೆಯನ್ನು ಉಗ್ರನೆಂದು ಬಣ್ಣಿಸಿದೆ ತೆಹೆಲ್ಕಾ ಮ್ಯಾಗಜಿನ್ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ್...

ಮುಂಬೈ: ಶಿವಸೇನೆಯ ಮುಖ್ಯಸ್ಥ ದಿವಂಗತ ಭಾಳ್ ಠಾಕ್ರೆಯನ್ನು ಉಗ್ರನೆಂದು ಬಣ್ಣಿಸಿದೆ ತೆಹೆಲ್ಕಾ ಮ್ಯಾಗಜಿನ್ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ (ಎಂಎನ್‌ಎಸ್ )ಸದಸ್ಯರು ದೂರು ನೀಡಿದ್ದಾರೆ.

ಯಾರು ಅತೀ ದೊಡ್ಡ ಉಗ್ರ ಎಂಬ ಶೀರ್ಷಿಕೆ ಕೊಟ್ಟಿರುವ ಕವರ್ ಸ್ಟೋರಿಯಲ್ಲಿ ಠಾಕ್ರೆಯನ್ನು ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ಭೂಗತ ದೊರೆ ದಾವೂದ್ ಇಬ್ರಾಹಿಂ,  1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್, ಖಲಿಸ್ತಾನ್ ಉಗ್ರರ ನಾಯಕ ಜರ್ನೈಲ್ ಸಿಂಗ್ ಬಿಂದ್ರನ್‌ವಾಲಾ ಮೊದಲಾದವರ ಹೆಸರು ಇರುವ ಉಗ್ರರ ಪಟ್ಟಿಯಲ್ಲಿ ಠಾಕ್ರೆಯ ಹೆಸರನ್ನೂ ಸೇರಿಸಲಾಗಿದೆ.

ಮ್ಯಾಗಜಿನ್‌ನ ಕವರ್ ಪುಟದಲ್ಲಿ  ಮೂವರು ಉಗ್ರರ ಫೋಟೋದೊಂದಿಗೆ ಠಾಕ್ರೆಯವರ ಫೋಟೋ ಕೂಡಾ ಇದೆ.

ತೆಹಲ್ಕಾ ಮ್ಯಾಗಜಿನ್ ವಿರುದ್ಧ ಎಂಎನ್‌ಎಸ್ ಸದಸ್ಯ ಬಾಲನಂದಗೋಣ್ಕರ್ ದೂರು ನೀಡಿದ್ದಾರೆ. ಠಾಕ್ರೆಯನ್ನು ಉಗ್ರನೆಂದು ಬಿಂಬಿಸಿದ ಮ್ಯಾಗಜಿನ್‌ಗೆ ಕೂಡಲೇ ತಡೆಯೊಡ್ಡಬೇಕು ಮತ್ತು ಸಂಪಾದಕ ಮ್ಯಾಥ್ಯೂ ಸ್ಯಾಮುವೆಲ್ ಅವರನ್ನು ಬಂಧಿಸಬೇಕೆಂದು ಎಂಎನ್‌ಎಸ್ ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT