ನವದೆಹಲಿ: ಪಾಕಿಸ್ತಾನದೊಂದಿಗೆ ಭಾರತ ಸರ್ಕಾರ ನಡೆಸಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಲು ಕಾಂಗ್ರೆಸ್ ಒತ್ತಾಯಿಸುತ್ತಿದೆ.
ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಮುಗ್ಧ ಗ್ರಾಮಸ್ಥರು ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಎನ್.ಎಸ್.ಎ ಮಟ್ಟದ ದ್ವಿಪಕ್ಷೀಯ ಮಾತುಕತೆಯನ್ನು ಕೂಡಲೇ ರದ್ದುಗೊಳಿಸಲು ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಆಗ್ರಹಿಸಿದ್ದಾರೆ.
ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿದ್ದರು ಭಾರತ ಸರ್ಕಾರ ದೇಶದ ಸಮಗ್ರತೆಯನ್ನು ಬಲಿಕೊಟ್ಟು ಪಾಕಿಸ್ತಾನದೊಂದಿಗೆ ಎನ್.ಎಸ್.ಎ ಮಟ್ಟದ ಮಾತುಕತೆ ನಡೆಸಲು ಮುಂದಾಗಿದೆ ಎಂದು ಮನೀಶ್ ತಿವಾರಿ ಆರೋಪಿಸಿದ್ದಾರೆ. ನೆರೆ ರಾಷ್ಟ್ರ ತನ್ನ ಅಮಾನುಷ ನಿಲ್ಲಿಸುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ನಿಲ್ಲಿಸಬೇಕು ಎಂದು ಮನೀಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ. ಗಡಿಯಲ್ಲಿ ಪಾಕ್ ನ ಗುಂಡಿನ ದಾಳಿ ಮುಂದುವರೆದಿದ್ದು ಈ ವರೆಗೂ 6 ಜನ ಮೃತಪಟ್ಟಿದ್ದಾರೆ.