ದೇಶ

ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಜೈಲಿಗೆ ಹಾಕಿ: ರಸ್ತೆ ಸುರಕ್ಷಾ ಸಮಿತಿ

Rashmi Kasaragodu

ನವದೆಹಲಿ: ಅತಿ ವೇಗದಲ್ಲಿ ವಾಹನ ಚಲಾಯಿಸುವವರ ಹಾಗೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವರ ಲೈಸನ್ಸ್ ಮೂರು ತಿಂಗಳ ಕಾಲ ಸಸ್ಪೆಂಡ್ ಮಾಡಬೇಕೆಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ ರಸ್ತೆ ಸುರಕ್ಷಾ ಸಮಿತಿ ಹೇಳಿದೆ.
ಅತೀ ವೇಗದ ಚಾಲನೆ ಮಾತ್ರವಲ್ಲ ಸಿಗ್ನಲ್ ಜಂಪ್ ಮಾಡಿದರೆ ಆ ಚಾಲಕನ ಲೈಸನ್ಸ್‌ನ್ನು ಮೂರು ತಿಂಗಳುಗಳ ಕಾಲ ಸಸ್ಪೆಂಡ್ ಮಾಡಲಾಗುವುದು. ರಸ್ತೆ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮದ್ಯ ಅಥವಾ ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಲಾಯಿಸುವರನ್ನು ಪೊಲೀಸರು ವಿಚಾರಣೆಗೊಳಪಡಿಸಿ ಜೈಲಿಗೆ ಹಾಕಬೇಕು ಎಂದು ಮೋಟಾರ್ ವಾಹನ ಕಾಯ್ದೆ ( 1988)ದ ಸೆಕ್ಷನ್ 185ನಲ್ಲಿ ಹೇಳಲಾಗಿದೆ. ಅದನ್ನೇ ನಾವು ಇಲ್ಲಿ ಸೂಚಿಸಿದ್ದೇವೆ ಎಂದು ಸಮಿತಿಯ ನೇತೃತ್ವ ವಹಿಸಿರುವ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಕೆ.ಎಸ್ ರಾಧಾಕೃಷ್ಣನ್ ಹೇಳಿದ್ದಾರೆ. ಈ ನಿಯಮಗಳನ್ನು ಎಲ್ಲ ರಾಜ್ಯಗಳು ಪಾಲಿಸಬೇಕೆಂದು ಸಮಿತಿ ಹೇಳಿದೆ.

ಸಮಿತಿ ಸಲ್ಲಿಸಿದ ಸೂಚನೆಗಳು ಹೀಗಿವೆ


ಅತೀ ವೇಗದಲ್ಲಿ ವಾಹನ ಚಲಾಯಿಸುವುದು, ಅತೀ ಭಾರವನ್ನು ಹೇರುವುದು, ಸರಕು ಗಾಡಿಗಳಲ್ಲಿ ಜನರನ್ನು ಕೊಂಡೊಯ್ಯುವುದು, ಮದ್ಯ ಅಥವಾ ಮಾದಕ ವಸ್ತು ಸೇವಿಸಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವ ವೇಳೆ ಮೊಬೈಲ್ ಫೋನ್ ಬಳಕೆ- ಹೀಗಿರುವ ಕೃತ್ಯಗಳನ್ನು ಮಾಡಿದವರ ಲೈಸನ್ಸ್‌ನ್ನು ಮೂರು ತಿಂಗಳುಗಳ ಕಾಲ ಸಸ್ಪೆಂಡ್ ಮಾಡಲಾಗುವುದು. ಸಿಗ್ನಲ್ ಜಂಪ್ ಮಾಡಿದವನ್ನು ಅತಿ ವೇಗದ ಚಲಾವಣೆ ಎಂದೇ ಪರಿಗಣಿಸಲಾಗುವುದು.

ಮದ್ಯ ಅಥವಾ ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಲಾಯಿಸಿದವರನ್ನು ಪೊಲೀಸರು ವಿಚಾರಣೆಗೊಳಪಡಿಸಬೇಕು. ಮೊದಲ ಬಾರಿಗೆ ಇಂಥಾ ತಪ್ಪು ಮಾಡಿದವರಿಗೂ ಇದೇ ಶಿಕ್ಷೆ ಅನ್ವಯವಾಗುತ್ತದೆ.

ವಾಹನ ಚಲಾಯಿಸುವರಿಗೆ ಮಾತ್ರವಲ್ಲ, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ.  ಹೆಲ್ಮೆಟ್ ಧರಿಸದವರ ಕೈಯಿಂದ ದಂಡ ವಸೂಲಿ ಮಾಡುವುದು ಮಾತ್ರವಲ್ಲ, ರಸ್ತೆ ಸುರಕ್ಷೆಯ ಬಗ್ಗೆ ಕನಿಷ್ಠ ಎರಡು ಗಂಟೆ ಕೌನ್ಸಿಲಿಂಗ್ ನೀಡಬೇಕು


ಸೀಟ್ ಬೆಲ್ಟ್ ಧರಿಸದವರಿಗೂ ದಂಡ ವಸೂಲಿ ಮಾಡುವುದರ ಜತೆಗೆ ಕೌನ್ಸಿಲಿಂಗ್ ಮಾಡಬೇಕು.

SCROLL FOR NEXT